ತಡೆರಹಿತ ಪ್ರಯಾಣ : “ಕ್ವಾಂಟಸ್” ದಾಖಲೆ (ನ್ಯೂಯಾರ್ಕ್-ಸಿಡ್ನಿಗೆ 19 ಗಂಟೆ ಹಾರಾಟ)

0
9

ಆಸ್ಟ್ರೇಲಿಯಾದ ವಿಮಾನಯಾನ ಸಂಸ್ಥೆ “ಕ್ವಾಂಟಸ್”ನ ಪ್ರಯಾಣಿಕರ ವಿಮಾನವು ತಡೆರಹಿತವಾಗಿ ಅತಿ ಹೆಚ್ಚು ದೂರದ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿ ದಾಖಲೆ ಬರೆದಿದೆ.

ಸಿಡ್ನಿ: ಆಸ್ಟ್ರೇಲಿಯಾದ  ವಿಮಾನಯಾನ ಸಂಸ್ಥೆ “ಕ್ವಾಂಟಸ್”ನ ಪ್ರಯಾಣಿಕರ ವಿಮಾನವು ತಡೆರಹಿತವಾಗಿ ಅತಿ ಹೆಚ್ಚು ದೂರದ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿ ದಾಖಲೆ ಬರೆದಿದೆ.

ನ್ಯೂಯಾರ್ಕ್ ನಿಂದ ಅಕ್ಟೋಬರ್ 18 ರ ಶುಕ್ರವಾರ ಹೊರಟಿದ್ದ ಬೋಯಿಂಗ್ 787-9 ವಿಮಾನವು 19 ಗಂಟೆಗಳ ಕಾಲ ಹಾರಾಟ ನಡೆಸಿ ಅಕ್ಟೋಬರ್ 20 ರ ಭಾನುವಾರ ಬೆಳಗ್ಗೆ ಸಿಡ್ನಿ ತಲುಪಿದೆ.

ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 49 ಮಂದಿ ಪ್ರಯಾಣಿಕರು ಇದ್ದರು. ಇಂಧನವನ್ನು ಮರುಭರ್ತಿ ಮಾಡದೇ 16,000 ಕಿಲೋ ಮೀಟರ್ ಗೂ ಹೆಚ್ಚು ದೂರ ಸಾಗುವಂತೆ ಮಾಡಲು ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು.

ದೀರ್ಷ ಹಾರಾಟ ಪ್ರಯಾಣಿಕರ ವಿಮಾನಯಾನ ಸೇವೆಯನ್ನು ಆರಂಭಿಸಿದ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಸಾರ್ವಜನಿಕ ವಿಮಾನಯಾನ ಸಂಸ್ಥೆ “ಕ್ವಾಂಟಸ್” ಪಾತ್ರವಾಗಿದೆ. ಈ ಮೊದಲು ಪರ್ತ್-ಲಂಡನ್ ನಡುವೆ ವಿಮಾನ ಆರಂಭಿಸಿ ದಾಖಲೆ ನಿರ್ಮಿಸಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲನ್ ಜೋಯ್ಸ್ ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚು ಇರುವ ಆಹಾರವನ್ನು ಪ್ರಯಾಣಿಕರಿಗೆ ನೀಡಲಾಗಿತ್ತು. ಮಂದ ಬೆಳಕು ಇರುವಂತೆ ಮಾಡಿ ಪ್ರಯಾಣಿಕರು ಹೆಚ್ಚು ನಿದ್ರೆ ಮಾಡುವ ವಾತಾವರಣವನ್ನು ನಿರ್ಮಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ವಿವಿಧ ಕಾಲ ವಲಯಗಳಲ್ಲಿ ವಿಮಾನ ಸಂಚಾರದಿಂದ ಹಾಗೂ ಸುದೀರ್ಘ ಪ್ರಯಾಣದಿಂದ ಪ್ರಯಾಣಿಕರ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳನ್ನು ಅಧ್ಯಯನ ಮಾಡಲು ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾಲಯಗಳ ಸಂಶೋಧನಾ ತಂಡದ ಸಹಾಯವನ್ನು ಪಡೆಯಲಾಗಿದೆ. ಎಂದು ಅವರು ತಿಳಿಸಿದ್ದಾರೆ.

ದಾಖಲೆಯ ವಿವರ 

# 19.16 ಗಂಟೆ ಪ್ರಯಾಣ ಅವಧಿ

# 17 ಗಂಟೆ ಪ್ರಯಾಣ ಇದುವರೆಗಿನ ಇದ್ದ ದಾಖಲೆ

# 15,994 ಕಿ.ಮೀ ನ್ಯೂಯಾರ್ಕ್-ಸಿಡ್ನಿ ನಡುವಿನ ದೂರ