ತಜ್ಞರು ಝೈಕಾ ವೈರಸ್‌ ವಿರುದ್ಧ ಹೋರಾಡುವ ಆರು ಪ್ರತಿರೋಧಕ (ಆ್ಯಂಟಿ ಬಾಡೀಸ್‌) ಸಂಶೋಧನೆ

0
362

ಝೈಕಾ ವೈರಸ್‌ ವಿರುದ್ಧ ಹೋರಾಡುವ ಆರು ಪ್ರತಿರೋಧಕಗಳನ್ನು(ಆ್ಯಂಟಿ ಬಾಡೀಸ್‌) ತಜ್ಞರು ಸಂಶೋಧನೆ ಮಾಡಿದ್ದು ಇದರಲ್ಲಿ ಭಾರತೀಯ ಸಂಶೋಧಕರೂ ಇದ್ದಾರೆ.

ವಾಷಿಂಗ್ಟನ್‌ (ಪಿಟಿಐ): ಝೈಕಾ ವೈರಸ್‌ ವಿರುದ್ಧ ಹೋರಾಡುವ ಆರು ಪ್ರತಿರೋಧಕಗಳನ್ನು(ಆ್ಯಂಟಿ ಬಾಡೀಸ್‌) ತಜ್ಞರು ಸಂಶೋಧನೆ ಮಾಡಿದ್ದು ಇದರಲ್ಲಿ ಭಾರತೀಯ ಸಂಶೋಧಕರೂ ಇದ್ದಾರೆ.

‘ಸೊಳ್ಳೆಯಿಂದ ಹರಡುವ ಈ ಝೈಕಾ ವೈರಸ್‌ನಿಂದ ವಿಶ್ವದಾದ್ಯಂತ 15 ಲಕ್ಷ ಜನ ನರಳುತ್ತಿದ್ದಾರೆ. ಈ ವೈರಸ್‌ ಅನ್ನು ಪತ್ತೆ ಹಚ್ಚುವ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ಪ್ರತಿರೋಧಕಗಳನ್ನು ಸಂಶೋಧನೆ ಮಾಡಲಾಗಿದೆ’ ಎಂದು ಅಮೆರಿಕದ ಲೊಯಲಾ ವಿಶ್ವವಿದ್ಯಾಲಯದ ರವಿ ದುರ್ವಾಸುಲಾ ತಿಳಿಸಿದ್ದಾರೆ.

‘ಈ ವೈರಸ್‌ನಿಂದ ಜ್ವರ, ಕಣ್ಣು ಉರಿ ಕಾಣಿಸಿಕೊಳ್ಳಬಹುದಷ್ಟೇ. ಆದರೆ, ಗರ್ಭಿಣಿಯರು ಈ ವೈರಸ್‌ ದಾಳಿಗೆ ಒಳಗಾದರೆ ಗರ್ಭಪಾತ, ಜನನಪೂರ್ವ ಮಗು ಸಾವು ಸಂಭವಿಸುವುದಲ್ಲದೆ, ಮಗು ಹುಟ್ಟಿನಿಂದಲೇ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ’ ಎಂದು ಸಹಾಯಕ ಪ್ರೊಫೆಸರ್‌ ಆದಿನಾರಾಯಣ ಕುನಮ್ನೇನಿ ಹೇಳಿದ್ದಾರೆ.