ತಂತ್ರಜ್ಞಾನ ಕಂಪನಿಗಳಿಗೆ ಬಳಕೆದಾರರ ಮಾಹಿತಿ (ಪರವಾನಗಿ ಇಲ್ಲದೆಯೇ ಅವಕಾಶ ಕಲ್ಪಿಸಿದ ಫೇಸ್‌ಬುಕ್‌)

0
395

ಬಳಕೆದಾರರ ಖಾಸಗಿ ಮಾಹಿತಿಯನ್ನು ತಂತ್ರಜ್ಞಾನ ಕಂಪನಿಗಳು ಪಡೆಯಲು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅವಕಾಶ ನೀಡಿರುವುದು ಬಹಿರಂಗವಾಗಿದೆ.

ನ್ಯೂಯಾರ್ಕ್‌ (ಪಿಟಿಐ): ಬಳಕೆದಾರರ ಖಾಸಗಿ ಮಾಹಿತಿಯನ್ನು ತಂತ್ರಜ್ಞಾನ ಕಂಪನಿಗಳು ಪಡೆಯಲು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅವಕಾಶ ನೀಡಿರುವುದು ಬಹಿರಂಗವಾಗಿದೆ.

‘ನೆಟ್‌ಫ್ಲಿಕ್ಸ್‌’ ಮತ್ತು ‘ಸ್ಪೊಟಿಫೈ’ಗೆ ಬಳಕೆದಾರರ ಖಾಸಗಿ ಮಾಹಿತಿ ಓದಲು ಫೇಸ್‌ಬುಕ್‌ ಅವಕಾಶ ಕಲ್ಪಿಸಿದೆ. ಜತೆಗೆ, ಮೈಕ್ರೊಸಾಫ್ಟ್‌  ಸರ್ಚ್‌ ಎಂಜಿನ್‌ ‘ಬಿಂಗ್‌’ ಪರವಾನಗಿ ಇಲ್ಲದೆಯೇ ಫೇಸ್‌ಬುಕ್‌ ಬಳಕೆದಾರರ ಸ್ನೇಹಿತರ ಹೆಸರುಗಳನ್ನು ನೋಡಬಹುದಾಗಿದೆ. ಇದೇ ರೀತಿ ಅಮೆಜಾನ್‌ ಬಳಕೆದಾರರ ಹೆಸರು ಮತ್ತು ಸಂಪರ್ಕ ಕುರಿತ ಮಾಹಿತಿಯನ್ನು ಪತ್ತೆ ಮಾಡುತ್ತಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಈ ಹಿಂದೆಯೂ ಮಾಹಿತಿ ಕನ್ನಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. 8.7 ಕೋಟಿ ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಕೇಂಬ್ರಿಜ್ ಅನಲಿಟಿಕಾ ಬಳಸಿಕೊಂಡಿತ್ತು.

ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಪಡೆಯಲು ಆನ್‌ಲೈನ್‌ ಉದ್ಯಮಗಳು, ಮನರಂಜನಾ ತಾಣಗಳು, ವಾಹನ ತಯಾರಕರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ 150ಕ್ಕೂ ಹೆಚ್ಚು ಕಂಪನಿಗಳಿಗೆ ಅವಕಾಶ ನೀಡಲಾಗಿದೆ.

ಗ್ರಾಹಕರ ರಕ್ಷಣೆಗೆ ಸಂಬಂಧಿಸಿದಂತೆ ‘ಫೆಡರಲ್‌ ಟ್ರೇಡ್‌ ಕಮಿಷನ್‌’ (ಎಫ್‌ಟಿಸಿ) ಜತೆ 2011ರಲ್ಲಿ ಮಾಡಿ
ಕೊಂಡ ಒಪ್ಪಂದದಂತೆ ಬಳಕೆದಾರರ ಮಾಹಿತಿಯನ್ನು ಪರವಾನಗಿ ಇಲ್ಲದೆ ನೀಡುವುದಿಲ್ಲ ಎಂದು ಫೇಸ್‌ಬುಕ್‌ ತಿಳಿಸಿತ್ತು.