‘ಡ್ರೋನ್‌ಗೂ ಮೇಕ್‌ ಇನ್ ಇಂಡಿಯಾ’

0
14

ವಿಮಾನ ಹಾಗೂ ಡ್ರೋನ್‌ಗಳಿಗೂ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಬುಧವಾರ ತಿಳಿಸಿದರು.

ವಿಮಾನ ಹಾಗೂ ಡ್ರೋನ್‌ಗಳಿಗೂ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಬುಧವಾರ ತಿಳಿಸಿದರು.

ಮುಂದಿನ ಕೆಲ ವರ್ಷಗಳಲ್ಲಿ ದೇಶಕ್ಕೆ 1,300 ವಿಮಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಮಾನಯಾನ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳು ಸೇರಿ ಅಗತ್ಯಗಳನ್ನು ಚರ್ಚಿಸಲಿವೆ ಎಂದಿದ್ದಾರೆ.

‘ಡ್ರೋನ್‌ಗಳಿಗೆ ಎರಡನೇ ಆದ್ಯತೆ. ಡ್ರೋನ್‌ಗಳಿಗೆ ದೇಶದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಹೀಗಾಗಿ ಅವುಗಳ ತಯಾರಿ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ’ ಎಂದರು.