ಡ್ರೋನ್‌ ಹಾರಾಟಕ್ಕೆ ಕಡ್ಡಾಯವಾಗಲಿದೆ ಲೈಸೆನ್ಸ್‌ : ಕೇಂದ್ರ ಸರ್ಕಾರ

0
439

ಇನ್ಮುಂದೆ ಯಾರು ಬೇಕಾದರೂ ಡ್ರೋನ್‌ಗಳನ್ನು ಹಾರಿಬಿಡುವಂತಿಲ್ಲ. ಎಲ್ಲವೂ ಸರಕಾರದ ಸುಪರ್ದಿಯಲ್ಲಿ ನಡೆಯಲಿದೆ. ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರಕಾರ ಡ್ರೋನ್‌ ಹಾರಾಟ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಿದ್ದು ಅದರಲ್ಲಿ ಲೈಸೆನ್ಸ್‌ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಹೊಸದಿಲ್ಲಿ:ಇನ್ಮುಂದೆ ಯಾರು ಬೇಕಾದರೂ ಡ್ರೋನ್‌ಗಳನ್ನು ಹಾರಿಬಿಡುವಂತಿಲ್ಲ. ಎಲ್ಲವೂ ಸರಕಾರದ ಸುಪರ್ದಿಯಲ್ಲಿ ನಡೆಯಲಿದೆ. ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರಕಾರ ಡ್ರೋನ್‌ ಹಾರಾಟ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಿದ್ದು ಅದರಲ್ಲಿ ಲೈಸೆನ್ಸ್‌ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಡಿಸೆಂಬರ್‌ 1ರಿಂದ ಡ್ರೋನ್‌ಗಳು ವಾಣಿಜ್ಯ ಸರಕಾಗಿ ಬಳಕೆಯಾಗಲಿದ್ದು, ಪರವಾನಗಿ ಅಗತ್ಯವಾಗಲಿದೆ. ತೂಕ ಮತ್ತು ಗಾತ್ರದ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. 250 ಗ್ರಾಂನಿಂದ 2 ಕೆ.ಜಿ. ತೂಕದವರೆಗಿನ ಡ್ರೋನ್‌ಗಳನ್ನು ಮಕ್ಕಳ ಆಟಿಕೆಗಳೆಂದು ಪರಿಗಣಿಸಿ ಅದಕ್ಕೆ ಪರವಾನಗಿಯಿಂದ ವಿನಾಯಿತಿ ತೋರಲಾಗಿದೆ. 

2 ಕೆ.ಜಿ.ಗಿಂತಲೂ ಹೆಚ್ಚಿನ ತೂಕದ ಡ್ರೋನ್‌ಗಳ ಹಾರಾಟ ಮತ್ತು ನಿಯಂತ್ರಣಕ್ಕೆ ಲೈಸನ್ಸ್‌ ಕಡ್ಡಾಯಗೊಳಿಸಲಾಗಿದ್ದು, 18 ವರ್ಷ ಮೇಲ್ಪಟ್ಟವರಷ್ಟೇ ಪಡೆಯಲು ಅರ್ಹತೆ ಪಡೆಯಲಿದ್ದಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 40 ಸಾವಿರ ಡ್ರೋನ್‌ಗಳಿದ್ದು, ಬಹುತೇಕ ಖಾಸಗಿ ಒಡೆತನದಲ್ಲಿವೆ.