ಡೆಹ್ರಾಡೂನ್​ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಹೆಸರಿಡಲು ನಿರ್ಣಯ

0
540

ಉತ್ತರಾಖಂಡನ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಹೆಸರು ಇಡಲು ಉತ್ತರಾಖಂಡ ಶಾಸನಸಭೆ 2018 ಡಿಸೆಂಬರ್ 5 ರ ಬುಧವಾರ ನಿರ್ಣಯ ಕೈಗೊಂಡಿದೆ.

ಡೆಹ್ರಾಡೂನ್​: ಇಲ್ಲಿನ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಹೆಸರು ಇಡಲು ಉತ್ತರಾಖಂಡ ಶಾಸನಸಭೆ 2018 ಡಿಸೆಂಬರ್ 5 ರ ಬುಧವಾರ ನಿರ್ಣಯ ಕೈಗೊಂಡಿದೆ.

ಬಿಜೆಪಿ ಸಂಸದೀಯ ವ್ಯವಹಾರಗಳ ಸಚಿವ ಪ್ರಕಾಶ್​ ಪಂಥ್​ ಅವರು ಸದನದಲ್ಲಿ ಈ ನಿರ್ಣಯ ಮಂಡಿಸಿದ್ದಾರೆ. ಪ್ರತಿಪಕ್ಷಗಳ ಸದಸ್ಯರ ಅನುಪಸ್ಥಿತಿ ಇದ್ದರೂ ಧ್ವನಿ ಮತದ ಮೂಲಕ ನಿರ್ಧಾರ ತೆಗೆದುಕೊಂಡಿದ್ದಾರೆ. ಅನುಮೋದನೆಗಾಗಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.

ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಹೆಸರು ಇಡುವ ಪ್ರಸ್ತಾಪನೆಗೆ ಕಳೆದ ತಿಂಗಳು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್​ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿತ್ತು.

ಆದರೆ ಕ್ಯಾಬಿನೆಟ್​ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್​ ಒಪ್ಪಿಕೊಂಡಿರಲಿಲ್ಲ. ತನ್ನ ಆಡಳಿತ ಅವಧಿಯಲ್ಲಿ ಈ ವಿಮಾನನಿಲ್ದಾಣಕ್ಕೆ ಆದಿಗುರು ಶಂಕರಾಚಾರ್ಯರ ಹೆಸರು ಇಡುವ ಪ್ರಸ್ತಾವನೆ ಇತ್ತು ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ, ಹಿಂದಿನ ಸರ್ಕಾರ ನಮ್ಮ ಎದುರು ಅಂಥ ನಿರ್ಧಾರದ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.