ಡೀಸೆಲ್ ಎಮಿಷನ್ ವಂಚನೆ ಪ್ರಕರಣ: “ಆಡಿ” ಸಿಇಒ ಬಂಧನ

0
21

ಫೋಕ್ಸ್​ವ್ಯಾಗನ್ ಕಂಪನಿಯ ಎಮಿಷನ್ ಸಾಫ್ಟ್​ವೇರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸೋದರ ಆಡಿ ಕಂಪನಿಯ ಮುಖ್ಯಸ್ಥ ರುಪರ್ಟ್ ಸ್ಟ್ಯಾಂಡ್ಲರ್ ಅವರನ್ನು ಜರ್ಮನಿ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ.

ಫ್ರಾಂಕ್​ಫರ್ಟ್: ಫೋಕ್ಸ್​ವ್ಯಾಗನ್ ಕಂಪನಿಯ ಎಮಿಷನ್ ಸಾಫ್ಟ್​ವೇರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 18 ರ ಸೋಮವಾರ ಆಡಿ ಕಂಪನಿಯ ಮುಖ್ಯಸ್ಥ ರುಪರ್ಟ್ ಸ್ಟ್ಯಾಂಡ್ಲರ್ ಅವರನ್ನು ಜರ್ಮನಿ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿತ ಸಾಕ್ಷ್ಯಗಳನ್ನು ರುಪರ್ಟ್ ನಾಶಪಡಿಸುವ ಸಾಧ್ಯತೆಯಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೋಕ್ಸ್​ವ್ಯಾಗನ್​ ಕಂಪನಿ ಡೀಸೆಲ್​ ವಾಹನಗಳಲ್ಲಿ ಎಮಿಷನ್​ ಸಾಫ್ಟ್​ವೇರ್​ನಲ್ಲಿ ಬದಲಾವಣೆ ಮಾಡುವ ಮೂಲಕ ಎಮಿಷನ್​ ಮಾನದಂಡಗಳ ಪರೀಕ್ಷೆಯಲ್ಲಿ ಕಾರುಗಳು ಪಾಸ್​ ಆಗುವಂತೆ ಮಾಡಿತ್ತು. 2015ರಲ್ಲಿ ಫೋಕ್ಸ್​​ವ್ಯಾಗನ್​ ಕಂಪನಿ ವಂಚನೆ ಪ್ರಕರಣವನ್ನು ಒಪ್ಪಿಕೊಂಡಿತ್ತು.

ಜತೆಗೆ ಕಳೆದ ತಿಂಗಳು ಯೂರೋಪ್​ನಾದ್ಯಂತ ಫೋಕ್ಸ್​ವ್ಯಾಗನ್​ ಕಂಪನಿ ಒಡೆತನದ ಆಡಿ ಎ6 ಮತ್ತು ಎ7 ಮಾದರಿಯ ಸುಮಾರು 60 ಸಾವಿರ ಕಾರುಗಳನ್ನು ವಾಪಸ್​ ಕರೆಸಿಕೊಂಡಿತ್ತು. ಕಳೆದ ವರ್ಷ ಕೂಡ 8.5 ಲಕ್ಷ ಕಾರುಗಳನ್ನು ಫೋಕ್ಸ್​ವ್ಯಾಗನ್​ ಕಂಪನಿ ವಾಪಸ್​ ಕರೆಸಿಕೊಂಡಿತ್ತು. ಡೀಸೆಲ್ ಎಮಿಷನ್ ವಂಚನೆಗೆ ಸಂಬಂಧಿಸಿದಂತೆ ಜರ್ಮನಿ ಸರ್ಕಾರ ಕಂಪನಿಗೆ 8,164 ಕೋಟಿ ರೂ. ದಂಡ ವಿಧಿಸಿದೆ.