ಡಿ.11ರಿಂದ ಸಂಸತ್‌ ಅಧಿವೇಶನ

0
196

ಸಂಸತ್‌ನ ಚಳಿಗಾಲದ ಅಧಿವೇಶನ ಡಿಸೆಂಬರ್‌ 11ರಿಂದ ಆರಂಭವಾಗಲಿದ್ದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವೂ ಅದೇ ದಿನ ಪ್ರಕಟವಾಗಲಿದೆ.

ನವದೆಹಲಿ (ಪಿಟಿಐ): ಸಂಸತ್‌ನ ಚಳಿಗಾಲದ ಅಧಿವೇಶನ ಡಿಸೆಂಬರ್‌ 11ರಿಂದ ಆರಂಭವಾಗಲಿದ್ದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವೂ ಅದೇ ದಿನ ಪ್ರಕಟವಾಗಲಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಎದುರಿಸಲಿರುವ ಪೂರ್ಣ ಪ್ರಮಾಣದ ಕೊನೆಯ ಅಧಿವೇಶನ ಇದಾಗಲಿದೆ. ಡಿಸೆಂಬರ್‌ 11ರಿಂದ ಜನವರಿ 8ರ ತನಕ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಸಮಿತಿ ಶಿಫಾರಸು ಮಾಡಿದ್ದು ಆ ಪ್ರಕಾರವೇ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್‌ ಗೊಯಲ್‌ ಹೇಳಿದ್ದಾರೆ.