ಡಿಸೆಂಬರ್ ನೊಳಗೆ ಆಧಾರ್ ಸೇರಿಸದಿದ್ದರೆ ಎಸ್.ಬಿ.ಐ ಖಾತೆ ಸ್ಥಗಿತ!

0
26

ಇದೇ ಡಿಸೆಂಬರ್ ಅಂತ್ಯದೊಳಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.

ಈ ಬಗ್ಗೆ ಎಸ್.ಬಿ.ಐ ಪ್ರಕಟಣೆ ಬಿಡುಗಡೆ ಮಾಡಿದ್ದು, ಡಿಸೆಂಬರ್‌ ಅಂತ್ಯದೊಳಗೆ ಖಾತೆಗೆ ಆಧಾರ್‌ ಲಿಂಕ್‌ ಆಗದೇ ಇದ್ದಲ್ಲಿ ಖಾತೆಯನ್ನೇ ಸ್ಥಗಿತಗೊಳಿಸಲು ಎಸ್‌ಬಿಐ ಮುಂದಾಗಿದೆ. ಒಂದೊಮ್ಮೆ ಬ್ಯಾಂಕ್ ಖಾತೆ ಸ್ಥಗಿತಗೊಂಡರೆ ಆ  ಖಾತೆಯ ಹಣದ ವಹಿವಾಟ ಸ್ಥಗಿತಗೊಳ್ಳುವುದು ಅಷ್ಟೇ ಅಲ್ಲದೇ ಖಾತೆಯಲ್ಲಿರುವ ಹಣ ಕೂಡ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗಿದೆ.
 
ಈ ಬಗ್ಗೆ ಆಂಗ್ಲ ವಿತ್ತ ಪತ್ರಿಕೆಯೊಂದು ವರದಿ ಮಾಡಿದ್ದು, “ಪರಿಷ್ಕೃತಗೊಂಡ ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಅಂತೆಯೇ ಬ್ಯಾಂಕ್‌ ಗ್ರಾಹಕರು ಡಿಸೆಂಬರ್ 31ರ  ಒಳಗಾಗಿ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್‌ ಮಾಡಬೇಕು.ಇದಕ್ಕಾಗಿ ಎಸ್‌ ಬಿಐ ವೆಬ್‌ ಸೈಟ್‌, ಎಸ್‌ ಎಂಎಸ್‌, ಎಟಿಎಂ ಕೇಂದ್ರಗಳು ಅಥವಾ ಖುದ್ದಾಗಿ ಬ್ಯಾಂಕ್‌ ಶಾಖೆಗಳಿಗೆ ತೆರಳಿ ಆಧಾರ್‌ ನೀಡಲು ಅವಕಾಶ ಇದೆ  ಎಂದು ಎಸ್‌ ಬಿಐ ಟ್ವೀಟ್‌ ಮಾಡಿದೆ.