ಡಿಜಿ ಯಾತ್ರಾ’ ಜಾರಿಗೆ ಕೆಲವೇ ದಿನ: ದೇಶೀಯ ವಿಮಾನ ನಿಲ್ದಾಣಗಳಲ್ಲಿನ್ನು ‘ಮುಖ ನೋಡಿ ಮಣೆ ಹಾಕ್ತಾರೆ’

0
584

ವಿಮಾನಯಾನ ಮಾಡಲು ದೃಢೀಕರಣಕ್ಕಾಗಿ ಹಲವು ದಾಖಲೆಗಳನ್ನು ಸಲ್ಲಿಸುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ವಿಮಾನಯಾನ ಸಚಿವಾಲಯ ಸುಲಭವಾದ ಉಪಾಯವೊಂದನ್ನು ಕಂಡುಕೊಂಡಿದೆ.

ಹೊಸದಿಲ್ಲಿ: ವಿಮಾನಯಾನ ಮಾಡಲು ದೃಢೀಕರಣಕ್ಕಾಗಿ ಹಲವು ದಾಖಲೆಗಳನ್ನು ಸಲ್ಲಿಸುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ವಿಮಾನಯಾನ ಸಚಿವಾಲಯ ಸುಲಭವಾದ ಉಪಾಯವೊಂದನ್ನು ಕಂಡುಕೊಂಡಿದೆ. 

ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. 

ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಕಾಂಕ್ಷಿ ‘ಡಿಜಿ’ ಯಾತ್ರಾ’ ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ. 

ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ. 

ಡಿಜಿ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಪ್ರಯಾಣಿಕರು ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಐಡಿ ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ಟಿಕೆಟ್ ಬಕ್ ಮಾಡುವಾಗ ಐಡಿ ಸಂಖ್ಯೆ ನೀಡಬೇಕು. ಮೊದಲ ಬಾರಿಯ ಪರಿಶೀಲನೆಗೆ ಐಡಿ ಕಾರ್ಡ್ ತರುವುದು ಅಗತ್ಯ. ಆನ್‌ಲೈನ್‌ನಲ್ಲಿಯೇ ಆಧಾರ್ ಸಂಖ್ಯೆಯನ್ನು ಪರಿಶೀಲನೆಗೆ ನೀಡಬಹುದು. ಇದಾದ ನಂತರ ಪ್ರಯಾಣಿಕರ ಭಾವಚಿತ್ರ ಡಿಜಿ ಯಾತ್ರೆಯ ಪ್ರೊಫೈಲ್‌ನಲ್ಲಿ ನೋಂದಣಿಯಾಗಲಿದೆ. 

ಈ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮನಿಸಿದಾಗ ಕೋಡ್ ಹಾಗೂ ಬೋರ್ಡಿಂಗ್ ಕಾರ್ಡ್‌ನ್ನು ಸ್ಕ್ಯಾನ್ ಮಾಡಿಸಿಸೂವ ಮೂಲಕ ಮುಖ ಚಹರೆ ನೀಡಿದರೆ ಸಾಕು. ಉಳಿದ ಕಡೆಯಲ್ಲ ಮುಖ ಚಹರೆಯ ಮೂಲಕವೇ ನಿಲ್ದಾಣದ ಗೇಟ್‌ಗಳು ತೆಗೆದುಕೊಳ್ಳುತ್ತವೆ.