ಡಿಜಿಟಲ್‌ ಪೇಮೆಂಟ್‌ಗೆ ಒತ್ತು: ಆರ್‌ಬಿಐ ಉನ್ನತ ಸಮಿತಿಗೆ ಅಧ್ಯಕ್ಷರಾಗಿ ನಂದನ್‌ ನಿಲೇಕಣಿ ನೇಮಕ

0
559

ಡಿಜಿಟಲ್‌ ಪೇಮೆಂಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ಮತ್ತೊಂದು ಸಮಿತಿ ರಚಿಸಿದೆ. ಐವರು ಸದಸ್ಯರ ಈ ಸಮಿತಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹೊಸದಿಲ್ಲಿ: ಡಿಜಿಟಲ್‌ ಪೇಮೆಂಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ಮತ್ತೊಂದು ಸಮಿತಿ ರಚಿಸಿದೆ. 

ಐವರು ಸದಸ್ಯರ ಈ ಸಮಿತಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

ಡಿಜಿಟಲ್‌ ಪೇಮೆಂಟ್‌ ಮತ್ತು ಆರ್ಥಿಕತೆಯ ಡಿಜಟಲೀಕರಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ. 

ಈ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಸಮಿತಿಯು ಮೊದಲ ಸಭೆ ಸೇರಿದ ನಂತರ 90 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಆರ್‌ಬಿಐ ತಿಳಿಸಿದೆ. 

ಸಮಿತಿಯ ಉಳಿದ ಸದಸ್ಯರೆಂದರೆ ಆರ್‌ಬಿಐ ಮಾಜಿ ಉಪ ಗವರ್ನರ್‌ ಎಚ್‌.ಆರ್‌. ಖಾನ್‌, ವಿಜಯ್‌ ಬ್ಯಾಂಕ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಸಾನ್ಸಿ, ಮಾಹಿತಿ ತಂತ್ರಜ್ಞಾನ ಇಲಾಖೆ ಮಾಜಿ ಕಾರ್ಯದರ್ಶಿ ಅರುಣ ಶರ್ಮ ಮತ್ತು ಐಐಎಂ ಅಹಮದಾಬಾದ್‌ನ ಕ್ರಿಯಾಶೀಲ ವಿಭಾಗದ ಮುಖ್ಯಸ್ಥರಾದ ಸಂಜಯ್‌ ಜೈನ್‌. 

ಡಿಜಿಟಲ್‌ ಪೇಮೆಂಟ್‌ಗಳಿಂದ ಗ್ರಾಹಕರಿಗೆ ಆಗುವ ಉಪಯೋಗಗಳು ಹಾಗೂ ಆರ್ಥಿಕತೆಗೆ ಇದರಿಂದಾಗುವ ಪರಿಣಾಮಗಳ ಕುರಿತು ಈ ಸಮಿತಿಯು ಕೆಲವು ಮಾರ್ಗಸೂಚಿಗಳನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ.