ಡಿಜಿಟಲ್‌ ಪಾವತಿಯಲ್ಲಿ ಗಮನಾರ್ಹ ಹೆಚ್ಚಳ

0
9

ಯುಪಿಐ ಪಾವತಿಯಲ್ಲಿ ಈ ವರ್ಷ 8.7 ಲಕ್ಷ ಕೋಟಿ ಹೆಚ್ಚಾಗಿದೆ. ಅದೇ ರೀತಿ ಮೊಬೈಲ್‌ ಮೂಲಕ ನಡೆಯುವ ಪಾವತಿ ವ್ಯವಸ್ಥೆಯಲ್ಲೂ ಗಮನಾರ್ಹ ಪ್ರಗತಿ ಕಂಡುಬಂದಿದ್ದು, 29.5 ಲಕ್ಷ ಕೋಟಿ ರೂ. ಈ ಹಣಕಾಸು ವರ್ಷದಲ್ಲಿ ಕಂಡುಬಂದಿದೆ ಎಂದು ಆರ್‌ಬಿಐನ ವರದಿಯೊಂದು ಹೇಳಿದೆ.

ಹೊಸದಿಲ್ಲಿ: ಯುಪಿಐ ಪಾವತಿಯಲ್ಲಿ ಈ ವರ್ಷ 8.7 ಲಕ್ಷ ಕೋಟಿ ಹೆಚ್ಚಾಗಿದೆ. ಅದೇ ರೀತಿ ಮೊಬೈಲ್‌ ಮೂಲಕ ನಡೆಯುವ ಪಾವತಿ ವ್ಯವಸ್ಥೆಯಲ್ಲೂ ಗಮನಾರ್ಹ ಪ್ರಗತಿ ಕಂಡುಬಂದಿದ್ದು, 29.5 ಲಕ್ಷ ಕೋಟಿ ರೂ. ಈ ಹಣಕಾಸು ವರ್ಷದಲ್ಲಿ ಕಂಡುಬಂದಿದೆ ಎಂದು ಆರ್‌ಬಿಐನ ವರದಿಯೊಂದು ಹೇಳಿದೆ. ಇದು ಡಿಜಿಟಲ್‌ ಪೇಮೆಂಟ್‌ ಯೋಜನೆಯನ್ನು ಮತ್ತಷ್ಟು ಉತ್ತೇಜಿಸಲಿದೆ.

ಈಗ ದೇಶದ ಬಹುತೇಕ ಮನೆಗಳಲ್ಲಿ ಇಂಟರ್‌ನೆಟ್‌ ಸೇವೆ ದೊರಕುತ್ತಿದ್ದು, ಈ ಮೂಲಕ ಡಿಜಿಟಲ್‌ ಪೆಮೆಂಟ್‌ ಸೇವೆ ಸುಲಭವಾಗುತ್ತಿದೆ. ಇಂದು ಪ್ರತಿ ಅಂಗಡಿಗಳಲ್ಲಿ, ಸಂತೆ ಮಾರುಕಟ್ಟೆಗಳಲ್ಲಿ, ಫುಡ್‌ ಸ್ಟಾಲ್‌ಗ‌ಳಲ್ಲಿ. ಸಾರಿಗೆ ಕ್ಷೇತ್ರಗಳಾದ ಅಟೋ ರಿಕ್ಷಾ ಮತ್ತು ಕ್ಯಾಬ್‌ಗಳಲ್ಲಿ ಇಂದು ಯುಪಿಐ ಮೂಲಕ ಮೊಬೈಲ್‌ ಪೇಮೆಂಟ್‌ಗಳು ನಡೆಯುತ್ತಿವೆ. ಇದರಿಂದ ಜನ ಕ್ಯಾಶ್‌ ಕೊಟ್ಟು ಕೊಂಡು ಕೊಳ್ಳುವುದಕ್ಕಿಂತ ಡಿಜಿಟಲ್‌ ಮನಿ ಮೂಲಕ ಕೊಂಡುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಡಿಜಿಟಲ್‌ ಪೇಮೆಂಟ್‌ ಬಹಳಷ್ಟು ಸಂದರ್ಭ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ತಮ್ಮ ಡೆಬಿಟ್‌ ಕಾರ್ಡ್‌ ಬಳಸಿ ಶಾಪಿಂಗ್‌ ನಡೆಸುತ್ತಿದ್ದ ಕೇಂದ್ರಗಳಲ್ಲಿ ಇಂದು ಯುಪಿಐ ಕೋಡ್‌ಗಳನ್ನು ಸ್ಕ್ಯಾನ್‌ ಮಾಡಿ ಹಣ ನೀಡಲಾಗುತ್ತಿದೆ.ಆದರೆ ಕೆಲವು ಕಡೆಗಳಲ್ಲಿ ಜನರು ಆನ್‌ಲೈನ್‌ ಪೇಮೆಂಟ್‌ಗಳಿಗೆ ಹಿಂಜರಿಯುತ್ತಿದ್ದಾರೆ. ಜನರು ಆನ್‌ಲೈನ್‌ಫ್ರಾಡ್‌ಗಳ ಬಗೆಗೆ ಹೆಚ್ಚು ಚಿಂತಿತರಾಗಿದ್ದಾರೆ. ಈ ಎಲ್ಲಾ ಆತಂಕಗಳ ನಡುವೆಯೂ ಡಿಜಿಟಲ್‌ ಪೇಮೆಂಟ್‌ಗಳಲ್ಲಿ ಗಮಾನಾರ್ಹ ಚೇತರಿಕೆಗಳು ಆಗುತ್ತಿವೆ.