ಡಿಎಸ್‌ಸಿ ಪ್ರಶಸ್ತಿ ಕಣದಲ್ಲಿ ಅರವಿಂದ್ ಅಡಿಗ

0
30

ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ನೀಡಲಾಗುವ ಡಿಎಸ್‌ಸಿ ಪ್ರಶಸ್ತಿಯ ಪೈಪೋಟಿಯಲ್ಲಿದೆ.

ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ನೀಡಲಾಗುವ ಡಿಎಸ್‌ಸಿ ಪ್ರಶಸ್ತಿಯ ಪೈಪೋಟಿಯಲ್ಲಿದೆ.

ಮುಂಬೈನ ಅಂಜಲಿ ಜೋಸೆಫ್ ಅವರ ‘ದಿ ಲಿವಿಂಗ್’, ಶ್ರೀಲಂಕಾದ ಅನುಕ್ ಅರುದ್‌ಪ್ರಸಗಮ್ ಅವರ ‘ದಿ ಸ್ಟೋರಿ ಆಫ್ ಎ ಬ್ರೀಫ್ ಮ್ಯಾರೇಜ್’, ಭಾರತ ಸಂಜಾತ ಟೆಕ್ಸಾಸ್ ನಿವಾಸಿ ಕರಣ್ ಮಹಾಜನ್ ಅವರ ‘ದಿ ಅಸೋಸಿಯೇಶನ್ ಆಫ್ ಸ್ಮಾಲ್ ಬಾಂಬ್ಸ್’ ಹಾಗೂ ಭಾರತ ಸಂಜಾತ ಅಮೆರಿಕದ ಸ್ಟೀಫನ್ ಆಲ್ಟರ್ ಅವರ ‘ಇನ್ ದ ಜಂಗಲ್ ಆಫ್ ನೈಟ್’ ಕೃತಿಗಳು ಪ್ರಶಸ್ತಿಯ ಕಣದಲ್ಲಿವೆ.

ನವೆಂಬರ್ 18ರಂದು ನಡೆಯುವ ಢಾಕಾ ಸಾಹಿತ್ಯ ಉತ್ಸವದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಲಾಗುತ್ತದೆ. ಪ್ರಶಸ್ತಿಯ ಮೊತ್ತ ₹ 16 ಲಕ್ಷ (25,000 ಅಮೆರಿಕನ್  ಡಾಲರ್).