ಡಾ.ಶಂಕರ್‌ ರಾಜಾರಾಮನ್‌ ಗೆ “ವ್ಯಾಸ ಸಮ್ಮಾನ್‌ ಪ್ರಶಸ್ತಿ”

0
359

‘ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್‌ ಪ್ರಶಸ್ತಿ’ಯ ಗೌರವಕ್ಕೆ ಬೆಂಗಳೂರಿನ ಸಂಸ್ಕೃತಿ ಕವಿ ಡಾ.ಶಂಕರ್‌ ರಾಜಾರಾಮನ್‌ ಭಾಜನರಾಗಿದ್ದಾರೆ

 ಬೆಂಗಳೂರು: ‘ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್‌ ಪ್ರಶಸ್ತಿ’ಯ ಗೌರವಕ್ಕೆ ಬೆಂಗಳೂರಿನ ಸಂಸ್ಕೃತಿ ಕವಿ ಡಾಶಂಕರ್‌ ರಾಜಾರಾಮನ್‌ ಭಾಜನರಾಗಿದ್ದಾರೆ.
 
ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ 1 ಲಕ್ಷ ರೂ. ನೀಡಿ ಗೌರವಿಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ರಾಜಾರಾಮನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಲೋಪತಿ ವೈದ್ಯರಾಗಿರುವ ರಾಜಾರಾಮನ್‌ ಮೈಸೂರಿನ ಕೆಎಸ್‌ಓಯುನಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 
 
ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಅತ್ಯುತ್ತಮ ಕೊಡುಗೆಗಾಗಿ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. 
” ಈ ಪ್ರಶಸ್ತಿಯಿಂದ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ,” ಎಂದು ರಾಜಾರಾಮನ್‌ ಪ್ರತಿಕ್ರಿಯಿಸಿದ್ದಾರೆ. 
 
ಕೇಂದ್ರ ಸರ್ಕಾರವು “ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್‌ ಪ್ರಶಸ್ತಿ’ಯನ್ನು 2002 ರಿಂದ ನೀಡಲಾರಂಬಿಸಿದೆ. 30-45 ವರ್ಷ ವಯಸ್ಸಿನ ಯುವ ವಿದ್ವಾಂಸರು  ಶಾಸ್ತ್ರೀಯ ಭಾರತೀಯ ಭಾಷೆಗಳಲ್ಲಿ ಸಾಧನೆ ಮಾಡಿದವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.