ಡಾ.ನಾರಾಯಣಾಚಾರ್ಯರಿಗೆ ಆದಿಕವಿ ಪ್ರಶಸ್ತಿ, ರೋಹಿಣಾಕ್ಷಗೆ ವಾಗ್ದೇವಿ ಪುರಸ್ಕಾರ

0
24

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವಿಭಾಗವು ಮೊದಲ ಬಾರಿಗೆ ಕೊಡ ಮಾಡುತ್ತಿರುವ ‘ಆದಿಕವಿ’ ಪುರಸ್ಕಾರಕ್ಕೆ ಬಹುಶ್ರುತ ವಿದ್ವಾಂಸ, ವಿಜಯವಾಣಿ ಅಂಕಣಕಾರ ಡಾ.ಕೆ.ಎಸ್. ನಾರಾಯಣಾಚಾರ್ಯ ಮತ್ತು ‘ವಾಗ್ದೇವಿ’ ಪ್ರಶಸ್ತಿಗೆ ಚಿಂತಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಆಯ್ಕೆ ಮಾಡಿದೆ.

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವಿಭಾಗವು ಮೊದಲ ಬಾರಿಗೆ ಕೊಡ ಮಾಡುತ್ತಿರುವ ‘ಆದಿಕವಿ’ ಪುರಸ್ಕಾರಕ್ಕೆ ಬಹುಶ್ರುತ ವಿದ್ವಾಂಸ, ವಿಜಯವಾಣಿ ಅಂಕಣಕಾರ ಡಾ.ಕೆ.ಎಸ್. ನಾರಾಯಣಾಚಾರ್ಯ ಮತ್ತು ‘ವಾಗ್ದೇವಿ’ ಪ್ರಶಸ್ತಿಗೆ ಚಿಂತಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಆಯ್ಕೆ ಮಾಡಿದೆ.

ಈ ಪ್ರಶಸ್ತಿಯು ತಲಾ 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ನವೆಂಬರ್.24ರಂದು ದಿ ಮಿಥಿಕ್ ಸೊಸೈಟಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಉದ್ಯಮಿ ಡಾ.ಮೋಹನದಾಸ ಪೈ ಪ್ರದಾನ ಮಾಡುವರು ಎಂದು ಪರಿಷದ್ ಅಧ್ಯಕ್ಷ ಪ್ರೊ.ಪ್ರೇಮಶೇಖರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಗ್ದೇವಿ ಶಿಕ್ಷಣ ಸಮೂಹ ಅಧ್ಯಕ್ಷ ಹಾಗೂ ಇಸ್ರೋ ಮಾಜಿ ವಿಜ್ಞಾನಿ ಕೆ.ಹರೀಶ್, ಜಿ.ಕೆ.ಗ್ರೂಪ್ ಅಧ್ಯಕ್ಷ ವೀಣಾ ಜಯರಾಮ್ ಮತ್ತು ಎಸ್.ಜಯರಾಮ್ ಅವರು ಈ ಪ್ರಶಸ್ತಿಗಳ ಪಾಲಕರಾಗಿದ್ದಾರೆ. ಹಲವು ವಿಚಾರ ಸಂಕಿರಣ ಆಯೋಜಿಸುವ ಮೂಲಕ ದೇಶದ ಬೌದ್ಧಿಕ ವಾತಾವರಣ ಬೆಸೆಯುವ ಕೆಲಸ ಮಾಡುತ್ತಿರುವ ಪರಿಷದ್, ಇತಿಹಾಸದ ಬಗ್ಗೆ ಹೆಚ್ಚು ತಿಳಿದುಕೊಂಡು ಬರೆಯುತ್ತಿರುವ ಬರಹಗಾರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡುತ್ತಿದೆ ಎಂದರು.

ನಮ್ಮಲ್ಲಿ ಬಹುತೇಕ ಇತಿಹಾಸಕಾರರು ಸಾಕಷ್ಟು ನೈಜ ವಿಷಯ ಮರೆಮಾಚಿ ತಪ್ಪು ವಿಚಾರಗಳನ್ನೇ ಹೈಲೆಟ್ ಮಾಡುತ್ತಿದ್ದಾರೆ. ಜನರು ಇದನ್ನೇ ನಿಜ ಎಂದು ಭಾವಿಸುವ ಸಾಧ್ಯತೆ ಎದುರಾಗಿದೆ. 6.5 ಲಕ್ಷ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ತ್ಯಾಗ ಮಾಡಿದ್ದು ಬೆಳಕಿಗೆ ಬರಲಿಲ್ಲ. ಪ್ರಪಂಚಕ್ಕೆ ಸಾಹಿತ್ಯವನ್ನು ಕೊಟ್ಟ ದೇಶ ನಮ್ಮದು. ಇದನ್ನು ಸ್ವಾವಲಂಬನೆಗೆ ದುರುಪಯೋಗ ಮಾಡಿಕೊಳ್ಳಬಾರದು. ಈ ಹಿನ್ನೆಲೆಯಲ್ಲಿ ಬರಹಗಾರರಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು. ಪರಿಷದ್​ನ ಗೌರವ ಸಲಹೆಗಾರ್ತಿ ಡಾ.ಎಸ್.ಆರ್.ಲೀಲಾ, ಪರಿಷದ್​ನ ಬೆಂಗಳೂರು ನಗರ ವಿಭಾಗದ ಅಧ್ಯಕ್ಷ ಡಾ. ಸಿ.ಎಸ್.ಕಿಶೋರ್ ಇತರರು ಉಪಸ್ಥಿತರಿದ್ದರು.