ಡಾಲರ್‌ ಎದುರು ಪಾತಾಳಕ್ಕಿಳಿದ ರೂಪಾಯಿ; 74ರ ಗಡಿ ದಾಟಿದ ಮೌಲ್ಯ

0
634

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಪಾತಾಳದತ್ತ ಮುಖ ಮಾಡಿದೆ.
ಅಮೆರಿಕನ್‌ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 74ರ ಗಡಿ ದಾಟಿದೆ.

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಪಾತಾಳದತ್ತ ಮುಖ ಮಾಡಿದೆ. 

ಅಮೆರಿಕನ್‌ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 74ರ ಗಡಿ ದಾಟಿದೆ. 

ಶುಕ್ರವಾರದ (ಅಕ್ಟೋಬರ್‌ 5) ದಿನದಂತ್ಯಕ್ಕೆ ಭಾರತೀಯ ರೂಪಾಯಿ ಮೌಲ್ಯ ಡಾಲರ್‌ ಎದುರು 74.20ಕ್ಕೆ ತಲುಪಿದೆ. 

ಇದು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮೌಲ್ಯವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2018ರಲ್ಲಿ ರೂಪಾಯಿ ಮೌಲ್ಯ ಒಟ್ಟು ಶೇಕಡ 13.5ರಷ್ಟು ಕುಸಿತ ಕಂಡಿದೆ. ಇದರ ಜತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೂ ಹೆಚ್ಚಳವಾಗಿರುವುದು ರೂಪಾಯಿ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.