ಡಬ್ಲ್ಯುಟಿಎ ಮಹಿಳಾ ಸಿಂಗಲ್ಸ್‌ ವಿಭಾಗದ ರ‍್ಯಾಂಕಿಂಗ್: 5ನೇ ಸ್ಥಾನಕ್ಕೇರಿದ ಬಿಯಾಂಕಾ : ಆ್ಯಶ್ಲಿ ಬಾರ್ಟಿ ಮರಳಿ ನಂಬರ್‌ 1

0
8

ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ ಕೆನಡಾ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್‌-5 ರಲ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ.

ನ್ಯೂಯಾರ್ಕ್‌: ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ ಕೆನಡಾ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್‌-5 ರಲ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ.

ಇದಕ್ಕೆ ಕಾರಣ, ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಗೆಲುವು.ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿದ ಬಿಯಾಂಕಾ ಈಗ 10 ಸ್ಥಾನ ನೆಗೆದುನೇ ಸ್ಥಾನಕ್ಕೆ ಬಂದಿದ್ದಾರೆ.

ಹಾಲಿ ಚಾಂಪಿಯನ್‌ ನವೋಮಿ ಒಸಾಕಾ ಪರಾಭವಗೊಂಡಿದ್ದರಿಂದ ನಂಬರ್‌ 1 ಪಟ್ಟವನ್ನು ಕಳೆದುಕೊಂಡು 4ಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮತ್ತೆ ನಂ.1 ಆಟಗಾರ್ತಿಯಾಗಿ ಮೂಡಿ ಬಂದಿದ್ದಾರೆ. ಕ್ಯಾರೋಲಿನಾ ಪ್ಲಿಸ್ಕೋವಾಗೆ 2ನೇ ಸ್ಥಾನ ಲಭಿಸಿದೆ. ಆದರೆ ಬಾರ್ಟಿ-ಪ್ಲಿಸ್ಕೋವಾ ನಡುವಿನ ಅಂಕಗಳ ಅಂತರ 400ರಷ್ಟೂ ಇಲ್ಲ.

ತೃತೀಯ ಸ್ಥಾನಕ್ಕೇರಿದ ಎಲಿನಾ ಸ್ವಿಟೋಲಿನಾ ಅವರದು 2 ಸ್ಥಾನಗಳ ಜಿಗಿತ. ಸಿಮೋನಾ ಹಾಲೆಪ್‌ಗೆ 2 ಸ್ಥಾನ ನಷ್ಟವಾಗಿದೆ. ಪೆಟ್ರಾ ಕ್ವಿಟೋವಾ, ಕಿಕಿ ಬರ್ಟೆನ್ಸ್‌, ಸೆರೆನಾ ವಿಲಿಯಮ್ಸ್‌ ಒಂದೊಂದು ಸ್ಥಾನ ಕೆಳಕ್ಕೆ ಇಳಿದಿದ್ದಾರೆ. ಬೆಲಿಂಡಾ ಬೆನ್ಸಿಕ್‌ 2 ಸ್ಥಾನಗಳ ಪ್ರಗತಿಯೊಂದಿಗೆ 10ನೇ ಸ್ಥಾನಿಯಾಗಿದ್ದಾರೆ.
 
ಸುಮಿತ್‌ ಜೀವನಶ್ರೇಷ್ಠ 174 ಯುಎಸ್‌ ಓಪನ್‌ ಮೊದಲ ಸುತ್ತಿನಲ್ಲಿ ರೋಜರ್‌ ಫೆಡರರ್‌ಗೆ ಬೆವರಿಳಿಸಿದ ಭಾರತದ ಸುಮಿತ್‌ ನಾಗಲ್‌ ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 174ನೇ ಸ್ಥಾನ ಪಡೆದಿದ್ದಾರೆ. ಪ್ರಜ್ಞೆàಶ್‌ ಗುಣೇಶ್ವರನ್‌ 3 ಸ್ಥಾನಗಳ ಪ್ರಗತಿ ಸಾಧಿಸಿ 85ಕ್ಕೆ ತಲುಪಿದ್ದಾರೆ. ರಾಮ್‌ಕುಮಾರ್‌ ರಾಮನಾಥನ್‌ ಒಂದು ಸ್ಥಾನ ಮೇಲೇರಿದ್ದಾರೆ (176).