ಡಬ್ಲ್ಯುಟಿಎ ಮಹಿಳಾ ಟೆನಿಸ್ ರ‍್ಯಾಂಕಿಂಗ್: ಅಗ್ರ ಕ್ರಮಾಂಕಕ್ಕೆ “ಆ್ಯಶ್ಲೆ ಬಾರ್ಟಿ”

0
29

ಆಸ್ಟ್ರೇಲಿಯಾದ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಬರ್ಮಿಂಗಂ ಕ್ಲಾಸಿಕ್‌ ಗ್ರಾಸ್‌ಕೋರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 43 ವರ್ಷಗಳ ನಂತರ ಬಳಿಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಈ ಹಿರಿಮೆಗೆ ಪಾತ್ರರಾಗಿದ್ದಾರೆ

ಬರ್ಮಿಂಗಂ (ಎಎಫ್‌ಪಿ): ಆಸ್ಟ್ರೇಲಿಯಾದ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಬರ್ಮಿಂಗಂ ಕ್ಲಾಸಿಕ್‌ ಗ್ರಾಸ್‌ಕೋರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 43 ವರ್ಷಗಳ ನಂತರ ಬಳಿಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಈ ಹಿರಿಮೆಗೆ ಪಾತ್ರರಾಗಿದ್ದಾರೆ

23 ವರ್ಷದ ಬಾರ್ಟಿ, ಬರ್ಮಿಂಗಂ ಟೂರ್ನಿಯ ಸಿಂಗಲ್ಸ್‌ ಫೈನಲ್‌ನಲ್ಲಿ 6–3, 7–5 ರಿಂದ ಜೂಲಿಯಾ ಜಾರ್ಜಸ್‌ ಅವರನ್ನು ಸೋಲಿಸಿದರು. ಜೂನ್ 24 ರ ಸೋಮವಾರ ಹೊಸ ಕ್ರಮಾಂಕ ಪಟ್ಟಿ ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ 6540 ಪಾಯಿಂಟ್ಸ್ ಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಪಡೆದಿದ್ದಾರೆ.

2014 ರಲ್ಲಿ ಟೆನಿಸ್‌ ಆಟಕ್ಕೆ ವಿದಾಯ ಹೇಳಿ ಬಿಗ್‌ ಬ್ಯಾಷ್‌ ಕ್ರಿಕೆಟ್‌ ಲೀಗ್‌ನಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡಕ್ಕೆ ಆಡಿದ್ದರು. ಮತ್ತೆ ಟೆನಿಸ್‌ಗೆ ಮರಳಿದ್ದು 2016ರಲ್ಲಿ. ಇವೋನಿ ಗೂಲಗಾಂಗ್‌, 1976ರಲ್ಲಿ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರಿದ ಆಸ್ಟ್ರೇಲಿಯಾದ ಕೊನೆಯ ಆಟಗಾರ್ತಿಯಾಗಿದ್ದರು

ಜೂನ್ 24 ರಂದು ಬಿಡುಗಡೆಯಾದ “ಡಬ್ಲ್ಯುಟಿಎ ಮಹಿಳಾ ಟೆನಿಸ್ ರ‍್ಯಾಂಕಿಂಗ್ ಪಟ್ಟಿ”

1 ನೇ  ರ‍್ಯಾಂಕ್ ಆಸ್ಟ್ರೇಲಿಯಾದ “ಆ್ಯಶ್ಲೆ ಬಾರ್ಟಿ”

2 ನೇ  ರ‍್ಯಾಂಕ್ ಜಪಾನ್‌ನ “ನವೋಮಿ ಒಸಾಕಾ”

3 ನೇ  ರ‍್ಯಾಂಕ್ ಜೆಕ್ ನ “ಕರೋಲಿನಾ ಪ್ಲಿಸ್ಕೋವಾ”

4 ನೇ  ರ‍್ಯಾಂಕ್ ಡಚ್ ನ “ಕಿಕಿ ಬರ್ಟೆನ್ಸ್”

5 ನೇ  ರ‍್ಯಾಂಕ್ ಜರ್ಮನಿಯ “ಏಂಜೆಲಿಕ್ ಕೆರ್ಬರ್”