ಟ್ವಿಟರ್‌ ಸಿಇಒ ಜಾಕ್‌ ಡಾರ್ಸಿಗೆ ಸಂಸದೀಯ ಸಮಿತಿಯಿಂದ ಸಮನ್ಸ್‌ ಜಾರಿ

0
462

ಸಾಮಾಜಿಕ ಜಾಲ ತಾಣ ದಿಗ್ಗಜ ಟ್ವಿಟರ್‌ಗೆ ಸಂಸದೀಯ ಸಮಿತಿ ವಿಚಾರಣೆ ಎದುರಿಸಲು ಫೆಬ್ರವರಿ 25ರಂದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ.

ಹೊಸದಿಲ್ಲಿ: ಸಾಮಾಜಿಕ ಜಾಲ ತಾಣ ದಿಗ್ಗಜ ಟ್ವಿಟರ್‌ಗೆ ಸಂಸದೀಯ ಸಮಿತಿ ವಿಚಾರಣೆ ಎದುರಿಸಲು ಫೆಬ್ರವರಿ 25ರಂದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ. 

ಟ್ವಿಟರ್‌ ಸಿಇಒ ಜಾಕ್‌ ಡಾರ್ಸಿ ಅವರು ಫೆಬ್ರವರಿ 11ರಂದು ವಿಚಾರಣೆಗೆ ಹಾಜರಾಗದಿರುವುದನ್ನು ಸಂಸದೀಯ ಸಮಿತಿ ಗಂಭೀರವಾಗಿ ಪರಿಗಣಿಸಿದೆ. 

ಸಾಮಾಜಿಕ ಜಾಲತಾಣದಲ್ಲಿ ನಾಗರಿಕರ ಹಕ್ಕುಗಳ ಸುರಕ್ಷತೆ, ಡೇಟಾ ಪ್ರೈವಸಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಎದುರು ಅವರು ವಿವರಣೆ ನೀಡಬೇಕಾಗಿತ್ತು. 

ಜಾಲತಾಣಗಳಲ್ಲಿ ಯಾವುದೇ ಬಗೆಯ ಸುಳ್ಳು ಸುದ್ದಿ, ದ್ವೇಷಮಯ ಹೇಳಿಕೆಗಳ ಪ್ರಸರಣವಾಗದಂತೆ ತಡೆಯುವ ನಿಟ್ಟಿನಲ್ಲಿ ಟ್ವಿಟರ್‌ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಿಗೆ, ಕಠಿಣ ಸಂದೇಶ ರವಾನಿಸಲು ಸರಕಾರ ಸಜ್ಜಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಈ ಬೆಳವಣಿಗೆ ಮಹತ್ವ ಪಡೆದಿತ್ತು. 

ಸಮಿತಿ ಮುಖ್ಯಸ್ಥ ಬಿಜೆಪಿ ಸಂಸದ ಅನುರಾಗ್‌ ಟ್ಯಾಗೋರ್‌ ಅವರು ಫೆ.1ರಂದು ವಿಚಾರಣೆಗೆ ಹಾಜರಾಗುವಂತೆ ಟ್ವಿಟರ್‌ಗೆ ಅಧಿಕೃತ ಪತ್ರದ ಮೂಲಕ ಸಮನ್ಸ್‌ ನೀಡಿದ್ದರು. ಅಲ್ಲದೆ, ಫೆಬ್ರವರಿ 7 ರಂದು ಸಂಸತ್‌ ಸ್ಥಾಯಿ ಸಮಿತಿಯ ಸಭೆ ನಿಗದಿಯಾಗಿದ್ದರೂ, ಟ್ವಿಟರ್‌ ಸಿಇಒ ಜಾಕ್‌ ಡಾರ್ಸಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಾಗಲೆಂದು ಫೆ.11ಕ್ಕೆ ಸಭೆಯನ್ನು ಮುಂದೂಡಿದ್ದರು. ಆದರೂ ಟ್ವಿಟರ್‌ ಕಡೆಗಣಿಸಿತ್ತು. ಇದೀಗ ಮತ್ತೆ ಫೆ.25ಕ್ಕೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಲಾಗಿದೆ.