ಟೋಕಿಯೋ ಒಲಿಂಪಿಕ್ಸ್​ಗೆ 20 ಕಿ.ಮೀ. ವಾಕಿಂಗ್​​ ವಿಭಾಗದಲ್ಲಿ ಅರ್ಹತೆ ಪಡೆದ ಮೊದಲ ಅಥ್ಲೀಟ್​ ಇರ್ಫಾನ್​

0
582

ಜಪಾನ್​ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟದ 20 ಕಿ.ಮೀ. ವಾಕಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತದ ಇರ್ಫಾನ್​ ಕೆ.ಟಿ. ಅರ್ಹತೆ ಪಡೆದುಕೊಂಡಿದ್ದಾರೆ. 2020ರ ಜುಲೈ 24ರಿಂದ ಆಗಸ್ಟ್​ 9ರವರೆಗೆ ನಡೆಯಲಿರುವ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ನವದೆಹಲಿ: ಜಪಾನ್​ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟದ 20 ಕಿ.ಮೀ. ವಾಕಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತದ ಇರ್ಫಾನ್​ ಕೆ.ಟಿ. ಅರ್ಹತೆ ಪಡೆದುಕೊಂಡಿದ್ದಾರೆ. 2020ರ ಜುಲೈ 24ರಿಂದ ಆಗಸ್ಟ್​ 9ರವರೆಗೆ ನಡೆಯಲಿರುವ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಜಪಾನ್​ನ ನೋಮಿಯಲ್ಲಿ ನಡೆದ ಏಷ್ಯನ್​ ರೇಸ್​ ವಾಕಿಂಗ್​ ಚಾಂಪಿಯನ್​ಷಿಪ್ಸ್​ನಲ್ಲಿ ಇರ್ಫಾನ್​ 1 ಗಂಟೆ 20 ನಿಮಿಷ 57 ಸೆ.ಗಳಲ್ಲಿ ಅಂತಿಮಗೆರೆ ದಾಟಿ 4ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡರು. 1 ಗಂಟೆ 21 ನಿಮಿಷದಲ್ಲಿ ಈ ಅಂತರವನ್ನು ಕ್ರಮಿಸುವುದು ಒಲಿಂಪಿಕ್ಸ್​ ಅರ್ಹತೆಯ ಮಾನದಂಡವಾಗಿತ್ತು. ಇದರೊಂದಿಗೆ ದೋಹಾದಲ್ಲಿ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ವರ್ಲ್ಡ್​ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸಲೂ ಅರ್ಹತೆ ಗಳಿಸಿಕೊಂಡಿದ್ದಾರೆ.

ಕೇರಳ ಮುಲದ ಇರ್ಫಾನ್​ 20 ಕಿ.ಮೀ. ವಾಕಿಂಗ್​ ಸ್ಪರ್ಧೆಯಲ್ಲಿ 1 ಗಂಟೆ 20 ನಿಮಿಷ 21 ಸೆ.ಗಳ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಅವರು ಈ ದಾಖಲೆಯೊಂದಿಗೆ 10ನೇ ಸ್ಥಾನ ಪಡೆದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಸೌಮ್ಯ ಬೇಬಿ 1:36:08 ಸಮಯದೊಂದಿಗೆ ಅಂತಿಮಗೆರೆ ದಾಟಿ ನಾಲ್ಕನೇ ಸ್ಥಾನ ಪಡೆದರಾದರೂ ಒಲಿಂಪಿಕ್ಸ್​ ಮತ್ತು ವರ್ಲ್ಡ್​ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸುವ ಅರ್ಹತೆ ಗಳಿಸಿಕೊಳ್ಳಲು ವಿಫಲರಾದರು. ಒಲಿಂಪಿಕ್ಸ್​ಗೆ 1:31:00 ಅರ್ಹತೆ ಮಾನದಂಡವಾಗಿದ್ದರೆ ವರ್ಲ್ಡ್​ ಚಾಂಪಿಯನ್​ಷಿಪ್​ಗೆ 1:33:30 ಅರ್ಹತೆ ಮಾನದಂಡವಾಗಿತ್ತು. (ಏಜೆನ್ಸೀಸ್​)