ಟೋಕಿಯೊ ಒಲಿಂಪಿಕ್ಸ್ ಲಾಂಛನಪ್ರಾಣಿ ಅನಾವರಣ

0
34

ಮುಂಬರುವ 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್​ನ ಶುಭ ಸೂಚಕ ಲಾಂಛನ ಪ್ರಾಣಿ ಯನ್ನು(ಮ್ಯಾಸ್ಕಟ್) ಆತಿಥೇಯ ಜಪಾನ್ ಜುಲೈ 22 ರ ಭಾನುವಾರ ಅಧಿಕೃತವಾಗಿ ಅನಾವರಣಗೊಳಿಸಿದೆ.

ಟೋಕಿಯೊ: ಮುಂಬರುವ 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್​ನ ಶುಭ ಸೂಚಕ ಲಾಂಛನ ಪ್ರಾಣಿ ಯನ್ನು(ಮ್ಯಾಸ್ಕಟ್) ಆತಿಥೇಯ ಜಪಾನ್ ಭಾನುವಾರ ಅಧಿಕೃತವಾಗಿ ಅನಾವರಣಗೊಳಿಸಿದೆ. ನೀಳಿ ಮತ್ತು ಬಿಳಿ ಬಣ್ಣದ ವಸ್ತ್ರದಲ್ಲಿರುವ ಮ್ಯಾಸ್ಕಟ್ ಒಲಿಂಪಿಕ್ಸ್​ಗೆ ತಯಾರಿಸಲಾಗಿದ್ದು, ಇದಕ್ಕೆ ಜಪಾನ್ ಭಾಷೆಯಲ್ಲಿ ‘ಮಿರಾಯ್ಟೊವಾ’ ಎಂದು ಹೆಸರಿಡಲಾಗಿದೆ. ಭವಿಷ್ಯ ಹಾಗೂ ಅನಂತತೆಯನ್ನು ಇದು ಪ್ರತಿಬಿಂಬಿಸುತ್ತದೆ. ಉಜ್ವಲ ಭವಿಷ್ಯದ ಆಶಯವಿರಲಿ ಎಂಬ ಅರ್ಥ ನೀಡುತ್ತದೆ. ಅಗಲ ಕಿವಿ ಹೊಂದಿರುವ ಮಿರಾಯ್ಟೊವಾ ಅತ್ಯುತ್ತಮ ಶ್ರವಣ ಶಕ್ತಿ ಹೊಂದಿದ್ದು, ಬಲಿಷ್ಠ ಕ್ರೀಡಾಪಟು ಎನ್ನುವುದಾಗಿದೆ. ಟೋಕಿಯೊ ಒಲಿಂಪಿಕ್ಸ್ 2020ರ ಜುಲೈ 24ರಿಂದ ನಡೆಯಲಿದ್ದರೆ, ಪ್ಯಾರಾಲಿಂಪಿಕ್ಸ್ ಆಗಸ್ಟ್ 25ರಂದು ಆರಂಭಗೊಳ್ಳಲಿದೆ.

ಸಮೈಟಿ ವಿಶೇಷತೆ: ಪ್ಯಾರಾಲಿಂಪಿಕ್ಸ್​ಗೆ ‘ಸಮೈಟಿ’ ಹೆಸರಿನ ಮ್ಯಾಸ್ಕಾಟ್ ಸಿದ್ಧಪಡಿಸಲಾಗಿದ್ದು, ಇದರ ವಸ್ತ್ರದ ಬಣ್ಣ ನಸುಗೆಂಪು ಮತ್ತು ಬಿಳಿ ಆಗಿದೆ. ಚೆರಿ ಹಣ್ಣಿನ ಮರ ಸೂಚಕವಾಗಿದ್ದು, ಇದರ ಅರ್ಥ ಉಜ್ವಲ ಭವಿಷ್ಯ ಮತ್ತು ಪ್ರಬಲ ಎನ್ನುವುದಾಗಿದೆ. ಜತೆಗೆ ಸಮೈಟಿ ನೋಡಲು ಬಹಳ ತಾಳ್ಮೆಯಿಂದಿದ್ದರೂ, ಅವಶ್ಯಕತೆ ಬಂದಾಗ ಅತ್ಯುತ್ತಮ ಬಲಶಾಲಿ ಯಾಗಬಲ್ಲುದು. ಒಟ್ಟಾರೆ ಇವೆರಡರ ಗುಣಗಳು ಏಕೀಕೃತ ಸಂಪ್ರದಾಯ ಮತ್ತು ಹೊಸತನವನ್ನು ಪ್ರತಿಬಿಂಬಿಸುತ್ತವೆ ಎಂದು ಸಂಘಟಕರು ವಿವರಿಸಿದ್ದಾರೆ. ಸಮೈಟಿಯ ಪಿಂಕ್ ಬಣ್ಣದ ಕಿವಿ ಚೂಪಾಗಿದ್ದು, ಹಣೆಯ ಮೇಲೆ ಟೋಕಿಯೊ 2020, ಪ್ಯಾರಾಲಿಂಪಿಕ್ ಗೇಮ್ಸ್ ಎಂದು ಬರೆಯಲಾಗಿದೆ. ಇವೆರಡೂ ಲಾಂಛನ ಪ್ರಾಣಿಗಳನ್ನು ಒಲಿಂಪಿಕ್ ಸಂಘಟಕರು ಕಳೆದ ಫೆಬ್ರವರಿಯಲ್ಲಿ, ಹೆಸರಿಡುವ ಮೊದಲು ಜಾಲತಾಣದಲ್ಲಿ ಬಿಡುಗಡೆಗೊಳಿಸಿ ಅಭಿಪ್ರಾಯ ಸಂಗ್ರಹಿಸಿದ್ದರು.

1968ರಿಂದ ಒಲಿಂಪಿಕ್ಸ್​ಗಳಲ್ಲಿ ಶುಭ ಸೂಚಕ ಲಾಂಭನ ಪ್ರಾಣಿ ಗಳನ್ನು ಹೆಸರಿಸಲಾಗುತ್ತಿದೆ. ಈ ಲಾಂಛನಪ್ರಾಣಿ ಆತಿಥೇಯ ರಾಷ್ಟ್ರದ ಸಂಸ್ಕೃತಿಯನ್ನು ಸಾರುವ ಸಂದೇಶಗಳನ್ನು ಒಳಗೊಂಡಿರುತ್ತದೆ.