‘ಟೇಕ್ ಆಫ್’ ಚಿತ್ರದ ನಟನೆಗಾಗಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ

0
19

ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಮಹೇಶ್ ನಾರಾಯಣ್ ನಿರ್ದೇಶನದ ಮಲಯಾಳಂ ಚಿತ್ರ ಟೇಕ್ ಆಫ್‍ನಲ್ಲಿ ಪಾರ್ವತಿಯ ಮನೋಜ್ಞ ಅಭಿನಯಕ್ಕಾಗಿ ಈ ಗೌರವ ಸಂದಿದೆ.

ಇರಾಕ್‍ನ ತ್ರಿಕ್ರಿತ್‍ನಲ್ಲಿ ಸಿಲುಕಿಕೊಂಡಿರುವ ನರ್ಸ್ ಪಾತ್ರವನ್ನು ಪಾರ್ವತಿ ನಿರ್ವಹಿಸಿದ್ದರು.

ಈ ಚಲನಚಿತ್ರೋತ್ಸದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ ಏಕೈಕ ಮಲಯಾಳಂ ಚಿತ್ರವಾಗಿದೆ ಟೇಕ್ ಆಫ್. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂ ನಟಿಯೊಬ್ಬರು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿರುವುದು ಇದೇ ಮೊದಲು.