ಟೆಸ್ಟ್‌ ಕ್ರಿಕೆಟ್‌ : ಶಿಖರ್ ಧವನ್ ಶತಕದ ದಾಖಲೆ

0
14

ಟೆಸ್ಟ್ ಪಂದ್ಯವೊಂದರಲ್ಲಿ ಊಟದ ವಿರಾಮಕ್ಕೂ ಮುನ್ನವೇ ಶತಕ ಗಳಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆಯನ್ನು ಶಿಖರ್ ಧವನ್ ಬರೆದರು.

ಬೆಂಗಳೂರು: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಜೂನ್ 14  ಗುರುವಾರ ಅಫ್ಗಾನಿಸ್ತಾನ ವಿರುದ್ಧ ಆರಂಭವಾದ ಟೆಸ್ಟ್ ನಲ್ಲಿ ಶತಕ ದಾಖಲಿಸಿದರು.

ಟೆಸ್ಟ್ ಪಂದ್ಯವೊಂದರಲ್ಲಿ ಊಟದ ವಿರಾಮಕ್ಕೂ ಮುನ್ನವೇ ಶತಕ ಗಳಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆದರು.

ಎಡಗೈ ಬ್ಯಾಟ್ಸ್‌ಮನ್ ಶಿಖರ್ 87 ಎಸೆತಗಳಲ್ಲಿ 100 ರನ್ ಗಳಿಸಿದರು. ಅದರಲ್ಲಿ 18 ಬೌಂಡರಿ, 3 ಸಿಕ್ಸರ್ ಇದ್ದವು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಭಾರತ ಊಟದ ವಿರಾಮಕ್ಕೆ 27 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 158 ರನ್ ಗಳಿಸಿದೆ. ಮುರಳಿ ವಿಜಯ್ 41 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಅಫ್ಗನ್ ತಂಡಕ್ಕೆ ಇದು ಮೊಟ್ಟಮೊದಲ ಟೆಸ್ಟ್‌ ಪಂದ್ಯವಾಗಿದೆ.