ಟೀಮ್‌ ಇಂಡಿಯಾ ರ‍್ಯಾಂಕಿಂಗ್‌: ಟೆಸ್ಟ್‌ ನಂ.1, ಏಕದಿನ ನಂ.2 & ಟಿ20 ನಂ.2

0
203

ಪ್ರಸಕ್ತ ವರ್ಷದ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 116 ರೇಟಿಂಗ್‌ ಗಳಿಸಿರುವ ಭಾರತ ನಂ.1 ಸ್ಥಾನದಲ್ಲಿದೆ. 106 ಮತ್ತು 105 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನಗಳಲ್ಲಿವೆ. 102 ಅಂಕ ಗಳಿಸಿರುವ ಆಸ್ಟ್ರೇಲಿಯಾ ನಂ.5ಕ್ಕೆ ಕುಸಿದಿದೆ.

ಮೆಲ್ಬೋರ್ನ್‌: ಇತ್ತೀಚೆಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌, ಏಕದಿನ ಮತ್ತು ಟಿ20 ಸರಣಿ ವಶ ಪಡಿಸಿಕೊಂಡಿರುವ ಭಾರತ ಅದ್ಭುತ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌, ಏಕದಿನ ಮತ್ತು ಟಿ20 ಸರಣಿ ಎದುರು ನೋಡುತ್ತಿದೆ. ವಿಂಡೀಸ್‌ ವಿರುದ್ಧದ ಟೆಸ್ಟ್‌ ಮತ್ತು ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮೂಲಕ ಗೆದ್ದಿರುವ ಭಾರತ ತಂಡ ಆಸ್ಟ್ರೇಲಿಯಾ ಆಟಗಾರರನ್ನು ತವರಲ್ಲೇ ಕಟ್ಟಿ ಹಾಕುವ ಹಮ್ಮಸ್ಸಿನಲ್ಲಿದೆ. 

ಟೆಸ್ಟ್‌ ರ‍್ಯಾಂಕಿಂಗ್‌: ಪ್ರಸಕ್ತ ವರ್ಷದ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 116 ರೇಟಿಂಗ್‌ ಗಳಿಸಿರುವ ಭಾರತ ನಂ.1 ಸ್ಥಾನದಲ್ಲಿದೆ. 106 ಮತ್ತು 105 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನಗಳಲ್ಲಿವೆ. 102 ಅಂಕ ಗಳಿಸಿರುವ ಆಸ್ಟ್ರೇಲಿಯಾ ನಂ.5ಕ್ಕೆ ಕುಸಿದಿದೆ. 

ಏಕದಿನ ರ‍್ಯಾಂಕಿಂಗ್‌: ಏಕದಿನ ಪಂದ್ಯಗಳ ಐಸಿಸಿ ಅಂಕ ಪಟ್ಟಿಯಲ್ಲಿ 121 ರೇಟಿಂಗ್‌ ಗಳೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. 126 ಅಂಕ ಗಳಿಸಿರುವ ಇಂಗ್ಲೆಂಡ್‌ ನಂ.1 ಸ್ಥಾನದಲ್ಲಿದೆ. ರೇಟಿಂಗ್‌ನಲ್ಲಿ 99 ಅಂಕ ಗಳಿಸಿರುವ ಆಸ್ಟ್ರೇಲಿಯಾ 6ನೇ ಸ್ಥಾನದಲ್ಲಿದೆ. 

ಟಿ20 ರ‍್ಯಾಂಕಿಂಗ್‌: 127 ಅಂಕ ಗಳಿಸಿರುವ ಟೀಮ್‌ ಇಂಡಿಯಾ 2ನೇ ಸ್ಥಾನದಲ್ಲಿದೆ. ಚುಟುಕು ಪಂದ್ಯಗಳಲ್ಲಿ ಕೊಂಚ ಮಟ್ಟಿಗೆ ಪ್ರಾಬಲ್ಯ ಸಾಧಿಸಿರುವ ಆಸ್ಟ್ರೇಲಿಯಾ 118 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಯುಎಇನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿರುವ ಪಾಕಿಸ್ತಾನ 138 ರೇಟಿಂಗ್ಸ್‌ ನೊಂದಿಗೆ ನಂ.1 ಸ್ಥಾನ ಅಲಂಕರಿಸಿದೆ.