ಟಿಬೆಟ್‌ನಲ್ಲಿ ವಿಶ್ವದ ಅತೀದೊಡ್ಡ ತಾರಾಲಯ ನಿರ್ಮಾಣಕ್ಕೆ ಚೀನಾ ನಿರ್ಧಾರ

0
18

‘ಮುಂದಿನ ವರ್ಷದ ವೇಳೆಗೆ ಟಿಬೆಟ್‌ನಲ್ಲಿ ವಿಶ್ವದ ಅತೀ ದೊಡ್ಡ ತಾರಾಲಯ ನಿರ್ಮಾಣ ಕಾರ್ಯ ಆರಂಭಿಸಲು ಚೀನಾ ಮುಂದಾಗಿದೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಭಾಗದಲ್ಲಿ ಚೀನಾದಲ್ಲಿ ನಿರ್ಮಿಸುತ್ತಿರುವ ಮೊದಲ ತಾರಾಲಯ ಇದಾಗಿದ್ದು, ಖಗೋಳ ದೂರದರ್ಶಕವು 1 ಮೀಟರ್‌ ವ್ಯಾಸದ ಲೆನ್ಸ್‌ ಹೊಂದಿರಲಿದೆ. ಖಗೋಳ ಕ್ಷೇತ್ರದ ಸಂಶೋಧನೆ ಮತ್ತು ಸಾರ್ವಜನಿಕ ವಿಜ್ಞಾನ ಶಿಕ್ಷಣಕ್ಕೆ ಪ್ರಮುಖ ಪ್ರಾದೇಶಿಕ ಮೂಲವಾಗಲಿದೆ’ ಎಂದು ಟಿಬೆಟ್‌ನ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗವು ತಿಳಿಸಿದೆ.

‘ಈ ಯೋಜನೆಯನ್ನು 2019ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಟಿಬೆಟ್‌ನ ಪ್ರಾಂತೀಯ ರಾಜಧಾನಿ ‘ಲಾಸಾ’ದಲ್ಲಿರುವ ನೈಸರ್ಗಿಕ ವಿಜ್ಞಾನ ಮ್ಯೂಸಿಯಂ ಒಳಗೆ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದೆ.

‘ತಾರಾಲಯವು ವಿಶ್ವದ ಅತ್ಯಂತ ಎತ್ತರದ ಭಾಗದಲ್ಲಿ ನಿರ್ಮಾಣವಾಗಲಿದ್ದು, ಖಗೋಳದ ಬಗ್ಗೆ ತಿಳಿದುಕೊಳ್ಳಲು ‘ಪರಿಪೂರ್ಣ ಕಿಟಕಿ’ಯಾಗಲಿದೆ.  ಇಲ್ಲಿ ಬಳಸುವ ಸಾಧನಗಳು ವೃತ್ತಿಪರ ಖಗೋಳ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ’ ಎಂದು ಇಲಾಖೆಯ ಉಪಮುಖ್ಯಸ್ಥ ವಾಂಗ್‌ ಜುಂಜಿ ತಿಳಿಸಿದ್ದಾರೆ.