ಟಿಬೆಟ್‌ನಲ್ಲಿ ಚೀನಾದ ಸೇನಾ ತುಕಡಿ ನಿಯೋಜನೆ

0
510

ಟಿಬೆಟ್‌ನ ಭಾರತದ ಗಡಿ ಭಾಗದಲ್ಲಿ ಚೀನಾವು ತನ್ನ ಸೇನಾ ತುಕಡಿಯನ್ನು ನಿಯೋಜಿಸಿದೆ.

ಬೀಜಿಂಗ್‌ (ಪಿಟಿಐ): ಟಿಬೆಟ್‌ನ ಭಾರತದ ಗಡಿ ಭಾಗದಲ್ಲಿ ಚೀನಾವು ತನ್ನ ಸೇನಾ ತುಕಡಿಯನ್ನು ನಿಯೋಜಿಸಿದೆ.

ಹಿಮಾಲಯ ಪ್ರಸ್ಥಭೂಮಿಯಲ್ಲಿ  ಅತ್ಯಾಧುನಿಕ ವಾಹನಗಳನ್ನು  ಯೋಧರಿಗೆ ನೀಡಿದ್ದು, ಈ ಭಾಗದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಗ್ಲೋಬಲ್‌ ಟೈಮ್ಸ್‌ ಮಂಗಳವಾರ ವರದಿ ಮಾಡಿದೆ.

ಸಂಚಾರ ತುಪಾಕಿ ವಾಹನಗಳು, ಲಘು ಯುದ್ಧ ಟ್ಯಾಂಕ್‌ಗಳನ್ನು ಒಳಗೊಂಡಿರುವ ಸೇನಾ ತುಕಡಿಗಳನ್ನು  ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ ಚೀನಾ ನಿಯೋಜಿಸಿದೆ.

ಇಲ್ಲಿ ನಿಯೋಜಿಸಲಾಗಿರುವ ಯುದ್ಧ ಟ್ಯಾಂಕ್‌ಗಳು 1,000 ಅಶ್ವಶಕ್ತಿ ಹೊಂದಿರುವ ಟೈಪ್‌ 15 ಎಂಜಿನ್‌ ಹೊಂದಿವೆ. ಹಿಮಾಲಯದಂತಹ ಪ್ರದೇಶದಲ್ಲಿ ಕಾರ್ಯಾಚರಿಸಲು ಅನುಕೂಲ
ವಾಗುವಂತೆ ಈ ಯುದ್ಧವಾಹನಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಅದು ವರದಿ ಮಾಡಿದೆ.