ಟಿಟಿ ರ‍್ಯಾಂಕಿಂಗ್: ಶರತ್‌ ಜೀವನಶ್ರೇಷ್ಠ ಸಾಧನೆ

0
368

ಭಾರತದ ಮನಿಕಾ ಬಾತ್ರಾ, ಅಚಾಂತ ಶರತ್‌ ಕಮಲ್‌ ಮತ್ತು ಜಿ.ಸತಿಯನ್‌ ಅಂತಾರಾಷ್ಟ್ರೀಯ ಟೇಬಲ್‌ ಟೆನಿಸ್‌ ಒಕ್ಕೂಟ ಮಂಗಳವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಜೀವನಶ್ರೇಷ್ಠ ರ‍್ಯಾಂಕ್ ಗಳಿಸಿದ್ದಾರೆ.

ಹೊಸದಿಲ್ಲಿ: ಭಾರತದ ಮನಿಕಾ ಬಾತ್ರಾ, ಅಚಾಂತ ಶರತ್‌ ಕಮಲ್‌ ಮತ್ತು ಜಿ.ಸತಿಯನ್‌ ಅಂತಾರಾಷ್ಟ್ರೀಯ ಟೇಬಲ್‌ ಟೆನಿಸ್‌ ಒಕ್ಕೂಟ 2018 ಅಕ್ಟೋಬರ್ 2 ರ ಮಂಗಳವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಜೀವನಶ್ರೇಷ್ಠ ರ‍್ಯಾಂಕ್ ಗಳಿಸಿದ್ದಾರೆ. 

ಈ ವರ್ಷ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (ಗೋಲ್ಡ್‌ ಕೋಸ್ಟ್‌ನಲ್ಲಿ) ಚಿನ್ನದ ಪದಕ ಜಯಿಸಿದ ಭಾರತದ ಮೊತ್ತಮೊದಲ ಟಿಟಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದ 23 ವರ್ಷದ ಮನಿಕಾ ತಮ್ಮ ಸ್ಥಿರ ಪ್ರದರ್ಶನದ ಫಲವಾಗಿ 1 ಸ್ಥಾನ ಉನ್ನತಿಯೊಂದಿಗೆ 55ನೇ ಶ್ರೇಯಾಂಕ ಗಳಿಸಿದರೆ; ಈ ವರ್ಷ ಇಂಡೊನೇಷ್ಯಾ ಏಷ್ಯಾಡ್‌ನಲ್ಲಿ ತಂಡ ವಿಭಾಗದಲ್ಲಿ ಚಿನ್ನ, ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ, ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದ 36 ವರ್ಷದ ಶರತ್‌ ಕಮಲ್‌ 4 ಸ್ಥಾನ ಬಡ್ತಿಯೊಂದಿಗೆ 31ನೇ ಶ್ರೇಯಾಂಕ ಪಡೆದಿದ್ದಾರೆ. 

ಇನ್ನು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 3 ಪದಕ ಹಾಗೂ ಏಷ್ಯಾಡ್‌ನಲ್ಲಿ (ಪುರುಷರ ತಂಡ ವಿಭಾಗ) ಒಂದು ಕಂಚು ಗೆದ್ದಿದ್ದ ಸತಿಯನ್‌ 4 ಸ್ಥಾನ ಊರ್ಜಿತದೊಂದಿಗೆ 36ನೇ ಶ್ರೇಯಾಂಕದಲ್ಲಿದ್ದಾರೆ.