ಟಿಕ್‌ ಟಾಕ್‌ ಬಳಕೆದಾರರಿಗೆ ಖುಷಿ ಸುದ್ದಿ: ಆ್ಯಪ್‌ ಮೇಲಿನ ನಿಷೇಧ ತೆರವುಗೊಳಿಸಿದ ಮದ್ರಾಸ್‌ ಹೈಕೋರ್ಟ್‌

0
472

ಟಿಕ್‌ ಟಾಕ್‌ ಮೊಬೈಲ್‌ ವೀಡಿಯೋ ಆ್ಯಪ್‌ ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ. ಚೀನಾ ಮೂಲದ ವೀಡಿಯೋ ಆ್ಯಪ್‌ ಟಿಕ್‌ ಟಾಕ್‌ ಮೇಲೆ ಹೇರಿದ್ದ ನಿಷೇಧವನ್ನು ಮದ್ರಾಸ್‌ ಹೈಕೋರ್ಟ್‌ ತೆರವುಗೊಳಿಸಿದೆ.

ಚೆನ್ನೈ:  ಟಿಕ್‌ ಟಾಕ್‌ ಮೊಬೈಲ್‌ ವೀಡಿಯೋ ಆ್ಯಪ್‌ ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ.ಚೀನಾ ಮೂಲದ ವೀಡಿಯೋ ಆ್ಯಪ್‌ ಟಿಕ್‌ ಟಾಕ್‌ ಮೇಲೆ ಹೇರಿದ್ದ ನಿಷೇಧವನ್ನು ಮದ್ರಾಸ್‌ ಹೈಕೋರ್ಟ್‌ ತೆರವುಗೊಳಿಸಿದೆ. 

ಕೆಲವು ದಿನಗಳ ಹಿಂದೆ ಮದ್ರಾಸ್‌ ಹೈಕೋರ್ಟ್‌ ಟಿಕ್‌ ಟಾಕ್‌ ಮೊಬೈಲ್‌ ವೀಡಿಯೋ ಆ್ಯಪ್‌ ಬಳಕೆಯನ್ನು ನಿಷೇಧಗೊಳಿಸಿತ್ತು. ಅಶ್ಲೀಲತೆಯನ್ನು ಉತ್ತೇಜಿಸುತ್ತಿದೆ ಎಂದು ಈ ಟಿಕ್‌ ಟಾಕ್‌ ಮೊಬೈಲ್‌ ವೀಡಿಯೋ ಆ್ಯಪ್‌ ಅನ್ನು ನಿಷೇಧಿಸಲಾಗಿತ್ತು. 

ಈ ಪ್ರಕರಣದ ವಿಚಾರಣೆಯನ್ನು ಇತ್ಯರ್ಥಗೊಳಿಸುವಂತೆ ಮದ್ರಾಸ್‌ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. 

ಅಶ್ಲೀಲತೆಯನ್ನು ನಿಯಂತ್ರಿಸುವ ಸಂಬಂಧ ಕೆಲವು ನಿಯಂತ್ರಣ ಹೇರಬೇಕೆಂದು ಸೂಚಿಸಲಾಗಿದೆ. ಅಲ್ಲದೇ ನಿಷೇಧ  ಹೇರುವುದರಿಂದ ಎಲ್ಲ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿರುವ ಎಲ್ಲ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಟಿಕ್‌ ಟಾಕ್‌ ಪರ ವಕೀಲರು ವಾದ ಮಂಡಿಸಿದರು. 

ಅಲ್ಲದೇ ಟಿಕ್‌ ಟಾಕ್‌ ಆ್ಯಪ್‌ನಲ್ಲಿ ಕೆಲವು ನಿಯಂತ್ರಣ ಹೇರುವುದಾಗಿ ಚೀನಾ ಕಂಪನಿ ಸ್ಪಷ್ಟಪಡಿಸಿದ ನಂತರ ಕೆಲವು ಷರತ್ತುಗಳನ್ನು ವಿಧಿಸಿ ನಿಷೇಧ ತೆರವುಗೊಳಿಸಲಾಯಿತು.