ಟಾಮಿ ಅಭಿಲಾಷ್‌ಗೆ ನೌಸೇನಾ ಪದಕ ಪ್ರದಾನ

0
362

ನೌಕಾಸೇನೆಯ ಕಮಾಂಡರ್‌ ಟಾಮಿ ಅಭಿಲಾಷ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೌ ಸೇನಾ ಪದಕ ಪ್ರದಾನ ಮಾಡಿದರು.

ನವದೆಹಲಿ(ಪಿಟಿಐ): ನೌಕಾಸೇನೆಯ ಕಮಾಂಡರ್‌ ಟಾಮಿ ಅಭಿಲಾಷ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೌ ಸೇನಾ ಪದಕ ಪ್ರದಾನ ಮಾಡಿದರು.

ಒಂಟಿಯಾಗಿ ವಿಶ್ವಪರ್ಯಟನೆ ನಡೆಸುವ ಗೋಲ್ಡನ್‌ ಗ್ಲೋಬ್‌ ರೇಸ್‌ನಲ್ಲಿ ಕಳೆದ ವರ್ಷ ಪಾಲ್ಗೊಂಡಿದ್ದ ವೇಳೆ ಟಾಮಿ ಅವರು ಪ್ರಯಾಣಿಸುತ್ತಿದ್ದ ಹಾಯಿದೋಣಿ ಬಿರುಗಾಳಿ ಮತ್ತು ಭಾರಿ ಅಲೆಗೆ ಸಿಲುಕಿ ಹಾನಿಗೀಡಾಗಿತ್ತು.

ಹಿಂದೂ ಮಹಾ ಸಾಗರದ ದಕ್ಷಿಣ ಭಾಗದಲ್ಲಿ ಸಿಲುಕಿಕೊಂಡಿದ್ದ ಅವರನ್ನು ಫ್ರೆಂಚ್‌ ನೌಕಾಪಡೆಯು ರಕ್ಷಿಸಿತ್ತು. ಈ ವೇಳೆ ಅವರು ಗಾಯಗೊಂಡಿದ್ದರು.