ಜೋಕೋ, ಒಸಾಕಗೆ ಎಟಿಪಿ ಟೆನಿಸ್ ರ‍್ಯಾಂಕಿಂಗ್ ನಲ್ಲಿ ಅಗ್ರ ಶ್ರೇಯಾಂಕ

0
7

ವಿಶ್ವ ನಂ. 1 ಹಾಗೂ 2018 ರ ಯುಎಸ್ ಓಪನ್​ ಟೆನಿಸ್ ಟೂರ್ನಿಯ ಹಾಲಿ ಚಾಂಪಿಯನ್​ಗಳಾದ ನೊವಾಕ್ ಜೋಕೊವಿಕ್ ಮತ್ತು ನವೋಮಿ ಒಸಾಕ ಎಟಿಪಿ ಟೆನಿಸ್ ರ‍್ಯಾಂಕಿಂಗ್ ನ ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ನ್ಯೂಯಾರ್ಕ್: ವಿಶ್ವ ನಂ. 1 ಹಾಗೂ  2018 ರ ಯುಎಸ್ ಓಪನ್​ ಟೆನಿಸ್ ಟೂರ್ನಿಯ ಹಾಲಿ ಚಾಂಪಿಯನ್​ಗಳಾದ ನೊವಾಕ್ ಜೋಕೊವಿಕ್ ಮತ್ತು ನವೋಮಿ ಒಸಾಕ ಎಟಿಪಿ ಟೆನಿಸ್ ರ‍್ಯಾಂಕಿಂಗ್ ನ  ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ   ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ಮುಂದಿನ  (ಆಗಸ್ಟ್ 26) ಸೋಮವಾರ ಆರಂಭಗೊಳ್ಳಲಿರುವ ಯುಎಸ್ ಓಪನ್​ ಟೆನಿಸ್ ಟೂರ್ನಿಯಲ್ಲಿ ಸೆರ್ಬಿಯಾ ತಾರೆ ಜೋಕೋ, 17ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿಗೆ ಪ್ರಯತ್ನಿಸಲಿದ್ದಾರೆ. ಸ್ಪೇನ್ ತಾರೆ ರಾಫೆಲ್ ನಡಾಲ್ 2 ಮತ್ತು ಸ್ವಿಸ್ ದಿಗ್ಗಜ ರೋಜರ್ ಫೆಡರರ್ 3ನೇ ಶ್ರೇಯಾಂಕ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಹಾಲಿ ರನ್ನರ್​ಅಪ್ ಸೆರೇನಾ ವಿಲಿಯಮ್ಸ್ 8ನೇ ಶ್ರೇಯಾಂಕ ಪಡೆದಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಆಶ್ಲೆಗ್ ಬಾರ್ಟಿ 2, ಮಾಜಿ ನಂ. 1 ಕ್ಯಾರೊಲಿನಾ ಪ್ಲಿಸ್ಕೋವಾ 3 ಮತ್ತು ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಲೆಪ್ 4ನೇ ಶ್ರೇಯಾಂಕ ಗಳಿಸಿದ್ದಾರೆ.

ಸಿಂಗಲ್ಸ್ ಶ್ರೇಯಾಂಕ: 

ಪುರುಷರ ವಿಭಾಗ: 1. ಜೋಕೊವಿಕ್ (ಸೆರ್ಬಿಯಾ), 2. ನಡಾಲ್ (ಸ್ಪೇನ್), 3. ರೋಜರ್ ಫೆಡರರ್ (ಸ್ವಿಜರ್ಲೆಂಡ್), 4.ಡೊಮಿನಿಕ್ ಥೀಮ್(ಆಸ್ಟ್ರಿಯಾ), 5.ಡೇನಿಯಲ್ ಮೆಡ್ವೆಡೇವ್ (ರಷ್ಯಾ), 6ಅಲೆಕ್ಸಾಂಡರ್ ಜ್ವೆರೇವ್ (ಜರ್ಮನಿ), 7. ನಿಶಿಕೋರಿ (ಜಪಾನ್), 8ಸ್ಟೆಫಾನೋಸ್ ಸಿಸಿಪಾಸ್ (ಗ್ರೀಸ್), 9.ಕರೇನ್ ಕಚನೋವ್ (ರಷ್ಯಾ), 10. ಅಗುಟ್ (ಸ್ಪೇನ್);

ಮಹಿಳಾ ವಿಭಾಗ: 1.  ನವೋಮಿ ಒಸಾಕ (ಜಪಾನ್), 2. ಆಶ್ಲೇ ಬಾರ್ಟಿ (ಆಸ್ಟ್ರೇಲಿಯಾ), 3.ಕರೋಲಿನಾ ಪ್ಲಿಸ್ಕೋವಾ (ಜೆಕ್ ಗಣರಾಜ್ಯ), 4. ಸಿಮೋನಾ ಹಲೆಪ್ (ರೊಮೇನಿಯಾ), 5.ಎಲಿನಾ ಸ್ವಿಟೊಲಿನಾ (ಉಕ್ರೇನ್), 6ಪೆಟ್ರಾ ಕ್ವಿಟೋವಾ (ಜೆಕ್ ಗಣರಾಜ್ಯ), 7. ಕಿಕಿ ಬೆರ್ಟೆನ್ಸ್ (ನೆದರ್ಲೆಂಡ್), 8. ಸೆರೇನಾ ವಿಲಿಯಮ್ಸ್ (ಅಮೆರಿಕ), 9. ಸಬಲೆಂಕಾ (ಬೆಲಾರಸ್), 10. ಕೀಯ್ಸ್ (ಅಮೆರಿಕ).