ಜೊಕೊವಿಚ್‌ಗಿಂತ ಕೊಹ್ಲಿ ಆದಾಯ ಹೆಚ್ಚು! :(ಫೋಬ್ಸ್‌ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ)

0
363

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ವಾರ್ಷಿಕ ಆದಾಯ ಗಳಿಕೆಯಲ್ಲಿ ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಮತ್ತು ಫುಟ್‌ಬಾಲ್‌ ತಾರೆ ಸರ್ಜಿಯೊ ಆಗುರೊ ಅವರನ್ನು ಹಿಂದಿಕ್ಕಿದ್ದಾರೆ.ಫೋಬ್ಸ್‌ ನಿಯತಕಾಲಿಕ ನವೆಂಬರ್ 27 ರ ಮಂಗಳವಾರ ಪ್ರಕಟಿಸಿರುವ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್‌ 83ನೇ ಸ್ಥಾನದಲ್ಲಿದ್ದಾರೆ. ಸರ್ಜಿಯೊ ಮತ್ತು ನೊವಾಕ್‌ ಅವರು 86ನೇ ಸ್ಥಾನ ಹೊಂದಿದ್ದಾರೆ.

ನವದೆಹಲಿ (ರಾಯಿಟರ್ಸ್‌): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ವಾರ್ಷಿಕ ಆದಾಯ ಗಳಿಕೆಯಲ್ಲಿ ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಮತ್ತು ಫುಟ್‌ಬಾಲ್‌ ತಾರೆ ಸರ್ಜಿಯೊ ಆಗುರೊ ಅವರನ್ನು ಹಿಂದಿಕ್ಕಿದ್ದಾರೆ.

ಫೋಬ್ಸ್‌ ನಿಯತಕಾಲಿಕ ನವೆಂಬರ್ 27 ರ ಮಂಗಳವಾರ ಪ್ರಕಟಿಸಿರುವ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್‌ 83ನೇ ಸ್ಥಾನದಲ್ಲಿದ್ದಾರೆ. ಸರ್ಜಿಯೊ ಮತ್ತು ನೊವಾಕ್‌ ಅವರು 86ನೇ ಸ್ಥಾನ ಹೊಂದಿದ್ದಾರೆ.

ವಿರಾಟ್‌ ಅವರು ಜಾಹೀರಾತು, ಸಂಭಾವನೆ ಮತ್ತು ಇತರೆ ಮೂಲಗಳಿಂದ ಹಿಂದಿನ 12 ತಿಂಗಳುಗಳಲ್ಲಿ ಒಟ್ಟು 170.06 ಕೋಟಿ ಆದಾಯ ಗಳಿಸಿದ್ದಾರೆ. ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ ಮತ್ತು ಸರ್ಜಿಯೊ ಅವರು ತಲಾ 166.47 ಕೋಟಿ ಆದಾಯ ಗಳಿಸಿದ್ದಾರೆ.

ಬ್ಯಾಸ್ಕೆಟ್‌ಬಾಲ್‌ ತಾರೆಗಳಾದ ಮಾರ್ಕ್‌ ಗ್ಯಾಸೋಲ್‌, ಡಿ ಆ್ಯಂಡ್ರೆ ಜೋರ್ಡನ್‌, ಸ್ಟೀವನ್‌ ಆ್ಯಡಮ್ಸ್‌, ಜೆ.ಜೆ.ರೆಡಿಕ್‌ ಅವರೂ ಕೊಹ್ಲಿಗಿಂತ ಹಿಂದಿದ್ದಾರೆ.

ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್‌, ಜಾಹೀರಾತು ಮೂಲಗಳಿಂದ 141.68 ಕೋಟಿ ಆದಾಯ ಗಳಿಸಿದ್ದಾರೆ. ಅವರು ಟಿಸ್ಸೊ, ಔಡಿ, ಪೂಮಾ, ಉಬರ್‌ ಮತ್ತು ಹೀರೊ ಸೇರಿದಂತೆ ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಿರಾಟ್‌ ಅವರು ಮುಂದೊಂದು ದಿನ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆ ಮೀರಿ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. 2015ರಲ್ಲಿ ಫೋಬ್ಸ್‌ ಪ್ರಕಟಿಸಿದ್ದ ಪಟ್ಟಿಯಲ್ಲಿ ಧೋನಿ ಅತಿ ಹೆಚ್ಚು (204.60 ಕೋಟಿ) ಆದಾಯ ಗಳಿಸಿದ್ದರು. ಕೊಹ್ಲಿ ಈ ಬಾರಿಯ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಆಗಿದ್ದಾರೆ.

ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್‌ ಅಗ್ರಸ್ಥಾನದಲ್ಲಿದ್ದಾರೆ. ಮೇವೆದರ್‌ ಹಿಂದಿನ 12 ತಿಂಗಳಲ್ಲಿ 2,019.51 ಕೋಟಿ ಆದಾಯ ಗಳಿಸಿದ್ದಾರೆ. ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ (786.13 ಕೋಟಿ) ಮತ್ತು ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (764.88 ಕೋಟಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

ಬ್ರೆಜಿಲ್‌ನ ಫುಟ್‌ಬಾಲ್‌ ಆಟಗಾರ ನೇಮರ್‌ (637.40 ಕೋಟಿ) ಮತ್ತು ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ( 547.03 ಕೋಟಿ) ಅವರು ಕ್ರಮವಾಗಿ ಐದು ಮತ್ತು ಏಳನೇ ಸ್ಥಾನ ಹೊಂದಿದ್ದಾರೆ.