ಜೆರುಸಲೇಂಗೆ ರಾಜಧಾನಿ ಸ್ಥಾನ ವಿಶ್ವಸಂಸ್ಥೆ ತಿರಸ್ಕಾರ

0
21

ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿಯಾಗಿ ಘೋಷಿಸಿರುವ ಅಮೆರಿಕದ ನಿರ್ಧಾರವನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.

ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿಯಾಗಿ ಘೋಷಿಸಿರುವ ಅಮೆರಿಕದ ನಿರ್ಧಾರವನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಗುರುವಾರ 128 ಮತಗಳ ಮೂಲಕ ಅಮೆರಿಕದ ನಿರ್ಧಾರವನ್ನು ತಿರಸ್ಕರಿಸಲಾಯಿತು. ಅಮೆರಿಕ ನಿರ್ಧಾರದ ಪರವಾಗಿ 9 ಮತಗಳು ದೊರೆತವು. 35 ರಾಷ್ಟ್ರಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದರು.

ಭಾರತ ಸಹ ಅಮೆರಿಕ ನಿರ್ಧಾರದ ವಿರುದ್ಧ ಮತ ಚಲಾಯಿಸಿತು.