‘ಜೆಎಂಬಿ’ ಉಗ್ರ ಸಂಘಟನೆ ಬ್ಯಾನ್‌

0
19

ಬಾಂಗ್ಲಾ ದೇಶದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಮತ್ತು ಭಾರತದಲ್ಲೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲದೇಶ್‌'(ಜೆಎಂಬಿ) ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ.

 
ಹೊಸದಿಲ್ಲಿ: ಬಾಂಗ್ಲಾ ದೇಶದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಮತ್ತು ಭಾರತದಲ್ಲೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲದೇಶ್‌'(ಜೆಎಂಬಿ) ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ. 
 
ಭಾರತದಲ್ಲಿ ಹಲವು ಉಗ್ರ ಕೃತ್ಯಗಳಿಗೆ ಪ್ರಚೋದನೆ ನೀಡಿ, ವಿಧ್ವಂಸಕ ಕೃತ್ಯಗಳನ್ನು ಎಸಗಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ‘ಜೆಎಂಬಿ’ ಸಂಘಟನೆಯನ್ನು ‘ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967‘ಗೆ ಸೇರಿಸಲಾಗಿದೆ. ಹೀಗಾಗಿ ತಕ್ಷಣದಿಂದಲೇ ಭಾರತದಲ್ಲಿ ಇದರ ಮೇಲೆ ನಿಷೇಧ ಜಾರಿಯಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. 

‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಇಂಡಿಯಾ’ ಅಥವಾ ಜಮಾತ್‌ ಉಲ್‌ ಮುಜಾಹಿದ್ದೀನ್‌ ಹಿಂದೂಸ್ತಾನ್‌’ ಹೆಸರಿನಲ್ಲೂ ಈ ಸಂಘಟನೆ ಸಕ್ರಿಯವಾಗಿತ್ತು. 2016ರ ಜುಲೈ 1ರಂದು ಢಾಕಾದ ಹೋಟೆಲೊಂದರಲ್ಲಿ ನಡೆದ ಸ್ಫೋಟದ ಹೊಣೆಯನ್ನು ಈ ಸಂಘಟನೆ ಹೊತ್ತಿತ್ತು. 17 ವಿದೇಶಿಯರು ಸೇರಿದಂತೆ 22 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು.