ಜೂ. ವಿಶ್ವ ಅಥ್ಲೆಟಿಕ್ಸ್​ಗೆ ಭಾರತ ತಂಡ ಪ್ರಕಟ

0
14

ಭಾರತದ ಉದಯೋನ್ಮುಖ ಅಥ್ಲೀಟ್​ಗಳಲ್ಲಿ ಒಬ್ಬರಾಗಿರುವ 18 ವರ್ಷದ ಹಿಮಾ ದಾಸ್ ಸೇರಿ 31 ಸದಸ್ಯರ ತಂಡವನ್ನು ಐಎಎಎಫ್ 20 ರ ವಯೋಮಿತಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್​ಗೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್​ಐ) ಪ್ರಕಟ ಮಾಡಿದೆ.

ನವದೆಹಲಿ: ಭಾರತದ ಉದಯೋನ್ಮುಖ ಅಥ್ಲೀಟ್​ಗಳಲ್ಲಿ ಒಬ್ಬರಾಗಿರುವ 18 ವರ್ಷದ ಹಿಮಾ ದಾಸ್ ಸೇರಿ 31 ಸದಸ್ಯರ ತಂಡವನ್ನು ಐಎಎಎಫ್   20 ರ ವಯೋಮಿತಿಯವಿಶ್ವ ಜೂನಿಯರ್ ಅಥ್ಲೆಟಿಕ್ಸ್​ಗೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್​ಐ) ಪ್ರಕಟ ಮಾಡಿದೆ. ಫಿನ್ಲೆಂಡ್​ನ ಟ್ಯಾಂಪರೆಯಲ್ಲಿ ಜುಲೈ 10ರಿಂದ 15ರವರೆಗೆ ಕೂಟ ನಡೆಯಲಿದೆ. ಏಷ್ಯಾಡ್ ತಂಡದಲ್ಲೂ ಇರುವ ಅಸ್ಸಾಂ ಮೂಲದ ಹಿಮಾ 200 ಮೀ. ಹಾಗೂ 400 ಮೀ. ಓಟದಲ್ಲಿ ಪ್ರಸ್ತುತ ಭಾರತದ ವೇಗದ ಓಟಗಾರ್ತಿ ಎನಿಸಿದ್ದಾರೆ. ದಾಸ್ ಅಲ್ಲದೆ, ಜೂನಿಯರ್ ರಾಷ್ಟ್ರೀಯ ದಾಖಲೆ ಹೊಂದಿರುವ ಕೇರಳದ ಲಾಂಗ್ ಜಂಪ್ ಅಥ್ಲೀಟ್ ಎಂ. ಶ್ರೀಶಂಕರ್, ಹ್ಯಾಮರ್ ಥ್ರೋ ಜೋಡಿ ಆಶಿಶ್ ಜಾಕರ್ ಹಾಗೂ ಧಮನೀತ್ ಸಿಂಗ್ ಕೂ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆಲ್ಲುವ ಫೇವರಿಟ್​ಗಳಾಗಿದ್ದಾರೆ. ಜಾವೆಲಿನ್ ಥ್ರೋ ಅಥ್ಲೀಟ್ ಸಾಹಿಲ್ ಸಿಲ್​ವಾಲ್, ದೂರ ಅಂತರದ ಓಟಗಾರ ಬೀಂತ್ ಸಿಂಗ್ ಮೇಲೂ ನಿರೀಕ್ಷೆ ಇದೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಜೂನಿಯರ್ ವಿಶ್ವದಾಖಲೆಯೊಂದಿಗೆ ಸ್ವರ್ಣ ಜಯಿಸಿದ್ದರು.