ಜೂನ್ 12 ರ ಪ್ರಚಲಿತ ಘಟನೆಗಳು

0
44

ಜೂನ್ 12 ರ ಪ್ರಚಲಿತ ಘಟನೆಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.

ವಾಯುಪ್ರದೇಶ ಮುಕ್ತ: ಪಾಕ್‌ ಸಮ್ಮತಿ

ಲಾಹೋರ್‌ (ಪಿಟಿಐ):  ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ತನ್ನ ವಾಯಪ್ರದೇಶದ ಮೂಲಕ ಸಂಚರಿಸಲು ಪಾಕಿಸ್ತಾನ ತಾತ್ವಿಕವಾಗಿ ಅನುಮೋದನೆ ನೀಡಿದೆ.

ಜೂನ್‌ 13–14ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ಬಾಲಾಕೋಟ್‌ನಲ್ಲಿದ್ದ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಶಿಬಿರಗಳ ಮೇಲೆ ಭಾರತ ಫೆ. 26ರಂದು ವಾಯುದಾಳಿ ನಡೆಸಿದ ನಂತರ ಪಾಕಿಸ್ತಾನ ತನ್ನ ವಾಯುಪ್ರದೇಶದ ಮೇಲೆ ವಿಮಾನಗಳ ಸಂಚಾರವನ್ನು ನಿಷೇಧಿಸಿದೆ.

‘ಸಂಬಂಧಪಟ್ಟ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಭಾರತ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು’ ಎಂದು ಪಾಕಿಸ್ತಾನದ ಅಧಿಕಾರಿ
ಯೊಬ್ಬರು ಹೇಳಿದ್ದಾರೆ.

 ಥಾಯ್ಲೆಂಡ್‌: ಪ್ರಯೂಥ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ

ಬ್ಯಾಂಕಾಕ್ (ಎಪಿ):  ಥಾಯ್ಲೆಂಡ್‌ನ ಪ್ರಧಾನಿಯಾಗಿ ಮಿಲಿಟರಿ ನಾಯಕ ಜನರಲ್‌ ಪ್ರಯೂಥ್‌ ಚಾನ್‌–ಒಚಾ ಆಯ್ಕೆಯಾಗಿದ್ದಾರೆ.

ಪ್ರಯೂಥ್‌ ಅವರನ್ನು ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿಸುವ ಸಂಬಂಧ ಸಂಸತ್‌ನಲ್ಲಿ ಕೈಗೊಂಡ ನಿರ್ಣಯವನ್ನು, ರಾಜ ದೃಢಪಡಿಸಿದರು. ಜೂನ್ 11 ರ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜನರಲ್‌ ಪ್ರಯೂಥ್‌, ರಾಜಾ ಮಹಾ ವಜಿರಲೊಂಗ್‌ಕಾರ್ನ್‌ ಅವರ ಭಾವಚಿತ್ರಕ್ಕೆ ಮಂಡಿಯೂರಿ ನಮಿಸಿ, ನಂತರ ಪ್ರಧಾನಿಯಾಗಿ ಪದಗ್ರಹಣ ಮಾಡಿದರು.
 
ನಾಸಾ :  ಅವಳಿ ಉಪಗ್ರಹ ಉಡಾವಣೆ

ವಾಷಿಂಗ್ಟನ್‌ (ಪಿಟಿಐ): ಸಂವಹನಕ್ಕೆ ಸಂಬಂಧಿಸಿದ ಸಂಕೇತಗಳ (ಸಿಗ್ನಲ್‌) ಚಲನೆಗೆ ಬಾಹ್ಯಾಕಾಶದಲ್ಲಿ ಉಂಟಾಗುವ ಅಡಚಣೆಯನ್ನು ಅಧ್ಯಯನ ಮಾಡಲು ಮುಂದಾಗಿರುವ ನಾಸಾ, ಅವಳಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ.

ಭೂಮಿಯ ಮೇಲ್ಮೈಯಲ್ಲಿನ ವಾತಾವರಣದ ಪರಿಣಾಮ ಸೇನೆ ಮತ್ತು ವಿಮಾನಯಾನ, ಜಿಪಿಎಸ್‌ ಸಿಗ್ನಲ್‌ಗಳು ವಿರೂಪಗೊಳ್ಳುತ್ತವೆ. ಅದರಲ್ಲೂ ಭೂಮಿಯ ಸಮಭಾಜಕ ವೃತ್ತದಲ್ಲಿ ಸಿಗ್ನಲ್‌ಗಳು ವಿರೂಪಗೊಳ್ಳುವ ಪ್ರಮಾಣವೂ ಅಧಿಕ. ಇದರಿಂದ ಮಿಲಿಟರಿ ಹಾಗೂ ವಿಮಾನಗಳ ಕಾರ್ಯಾಚರಣೆಗೆ ಸಾಕಷ್ಟು ತೊಂದರೆಯಾಗುತ್ತದೆ.