ಜೂಜು ಕಂಪನಿಯ ಲೇಡಿಬಾಸ್‌ಗೆ 2000 ಕೋಟಿ ರೂ. ವೇತನ!

0
307

ಗ್ಯಾಂಬ್ಲಿಂಗ್‌(ಜೂಜು) ಕಂಪನಿ ‘ಬೆಟ್‌365’ನ ಬಿಲಿಯನೇರ್‌ ಸಂಸ್ಥಾಪಕಿ ಡೆನಿಸ್‌ ಕೋರ್ಟ್ಸ್, 2017ರಲ್ಲಿ ಪಡೆದ ವೇತನ ಎಷ್ಟು ಗೊತ್ತಾ? ಕೇವಲ 279 ದಶಲಕ್ಷ ಡಾಲರ್‌ಗಳು. ಅಂದರೆ, 2000 ಕೋಟಿ ರೂ.! ಇದೇ ವರ್ಷದಲ್ಲಿ ಆ್ಯಪಲ್‌ ಸಿಇಒ ಟಿಮ್‌ ಕುಕ್‌ರ ಒಟ್ಟು ಕಾಂಪನ್‌ಸೇಷನ್‌ ಬರೀ 12.8 ದಶಲಕ್ಷ ಡಾಲರ್‌(91 ಕೋಟಿ ರೂ.).

ಲಂಡನ್‌: ಗ್ಯಾಂಬ್ಲಿಂಗ್‌(ಜೂಜು) ಕಂಪನಿ ‘ಬೆಟ್‌365‘ನ ಬಿಲಿಯನೇರ್‌ ಸಂಸ್ಥಾಪಕಿ ಡೆನಿಸ್‌ ಕೋರ್ಟ್ಸ್, 2017ರಲ್ಲಿ ಪಡೆದ ವೇತನ ಎಷ್ಟು ಗೊತ್ತಾ? ಕೇವಲ 279 ದಶಲಕ್ಷ ಡಾಲರ್‌ಗಳು. ಅಂದರೆ, 2000 ಕೋಟಿ ರೂ.! ಇದೇ ವರ್ಷದಲ್ಲಿ ಆ್ಯಪಲ್‌ ಸಿಇಒ ಟಿಮ್‌ ಕುಕ್‌ರ ಒಟ್ಟು ಕಾಂಪನ್‌ಸೇಷನ್‌ ಬರೀ 12.8 ದಶಲಕ್ಷ ಡಾಲರ್‌(91 ಕೋಟಿ ರೂ.). 

ಬ್ರಿಟನ್‌ ಮೂಲದ ‘ಬೆಟ್‌365‘ ಕಂಪನಿಯ ಜಂಟಿ ಕಾರ್ಯ ನಿರ್ವಾಹಕ ಅಧಿಕಾರಿಯೂ ಆಗಿರುವ 51 ವರ್ಷದ ಡೆನಿಸ್‌, 410 ಕೋಟಿ ರೂ. ಡಿವಿಡೆಂಟ್‌ ಪೇಮೆಂಟ್‌ ಅನ್ನು ಪಡೆದಿದ್ದಾರೆ. ಕಂಪನಿಯಲ್ಲಿ ಶೇ.50ರಷ್ಟು ಷೇರನ್ನು ಹೊಂದಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ವೇತನ ಪಡೆದ ಮಹಿಳಾ ಉನ್ನತಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಟೋಕ್‌ ಸಿಟಿ ಫುಟ್‌ಬಾಲ್‌ ಟೀಮ್‌ ವೆಚ್ಚಕ್ಕೆ ಹೋಲಿಸಿದರೆ ಡೆನಿಸ್‌ ವೇತನವು ಎರಡು ಪಟ್ಟು ಜಾಸ್ತಿಯೇ ಇದೆ. ಆನ್‌ಲೈನ್‌ ಗ್ಯಾಂಬ್ಲಿಂಗ್‌ನಲ್ಲಿ ಬ್ರಿಟನ್‌ ಶೇ.32ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.