ಜೀವನ ವೆಚ್ಚದ ವಿಶ್ವ ಪಟ್ಟಿಯಲ್ಲಿ ಭಾರತದ ಈ ಮೂರು ಮಹಾನಗರಗಳು ಅತ್ಯಂತ ಅಗ್ಗವೆನ್ನುತ್ತದೆ : ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ ಸಮೀಕ್ಷೆ

0
583

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ 2019 ನಡೆಸಿದ ವಿಶ್ವಾದ್ಯಂತ ಜೀವನ ವೆಚ್ಚದ ಸಮೀಕ್ಷೆಯಲ್ಲಿ ಜೀವನ ನಡೆಸಲು ದೆಹಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳು ವಿಶ್ವದಲ್ಲೇ ಅತ್ಯಂತ ಅಗ್ಗದ ನಗರಗಳಾಗಿವೆ ಎಂದು ತಿಳಿದುಬಂದಿದೆ.

ನ್ಯೂಯಾರ್ಕ್‌: ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ 2019 ನಡೆಸಿದ ವಿಶ್ವಾದ್ಯಂತ ಜೀವನ ವೆಚ್ಚದ ಸಮೀಕ್ಷೆಯಲ್ಲಿ ಜೀವನ ನಡೆಸಲು ದೆಹಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳು ವಿಶ್ವದಲ್ಲೇ ಅತ್ಯಂತ ಅಗ್ಗದ ನಗರಗಳಾಗಿವೆ ಎಂದು ತಿಳಿದುಬಂದಿದೆ.

ಪ್ಯಾರಿಸ್‌, ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ ನಗರಗಳು ವಿಶ್ವದ ಅತ್ಯಂತ ದುಬಾರಿ ನಗರಗಳಾಗಿವೆ ಎಂದು ಅಧ್ಯಯನ ತಿಳಿಸಿದೆ.

ಸ್ವಿಟ್ಜರ್‌ಲೆಂಡ್‌ನ ಜುರಿಚ್‌ ನಗರವು ನಾಲ್ಕನೇ ಸ್ಥಾನದಲ್ಲಿದ್ದು, ಜಪಾನ್‌ನ ಒಸಾಕಾವು ಐದನೇ ಸ್ಥಾನವನ್ನು ಸ್ವಿಟ್ಜರ್‌ಲೆಂಡ್‌ನ ಜಿನೇವಾದೊಂದಿಗೆ ಐದನೇ ಸ್ಥಾನವನ್ನು ಹಂಚಿಕೊಂಡಿದೆ.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌, ಡೆನ್ಮಾರ್ಕ್‌ನ ಕೂಪನ್‌ಹ್ಯಾಗನ್‌ ಮತ್ತು ನ್ಯೂಯಾರ್ಕ್‌ ಜಂಟಿಯಾಗಿ ಏಳನೇ ಸ್ಥಾನದಲ್ಲಿವೆ.

ಅಮೆರಿಕದ ಲಾಸ್‌ ಏಂಜಲೀಸ್‌ ಮತ್ತು ಇಸ್ರೇಲ್‌ನ ಟೆಲ್‌ ಅವಿವ್‌ ನಗರವು ಜಗತ್ತಿನ ಅತ್ಯಂತ ದುಬಾರಿ 10ನೇ ನಗರಗಳೆಂದು ಹೆಸರಿಸಲಾಗಿದೆ.

ಈ ಸಮೀಕ್ಷೆಯಲ್ಲಿ ಪ್ರಪಂಚದಾದ್ಯಂತ 133 ನಗರಗಳಲ್ಲಿ 150 ಕ್ಕಿಂತಲೂ ಹೆಚ್ಚಿನ ವಸ್ತುಗಳನ್ನು ಪಟ್ಟಿಮಾಡಲಾಗಿದೆ.

ವಿಶ್ವದ ಅತ್ಯಂತ ಅಗ್ಗದ ನಗರಗಳಾಗಿ ವೆನಿಜುವೆಲ್ಲಾದ ಕಾರಕಾಸ್‌, ಸಿರಿಯಾದ ಡಮಾಸ್ಕಸ್‌, ಉಜಕಿಸ್ತಾನದ ಟಾಶ್ಕೆಂಟ್‌, ಕಜಕಿಸ್ತಾನದ ಅಲ್ಮಾಟಿ, ಪಾಕಿಸ್ತಾನದ ಕರಾಚಿ, ನೈಜೀರಿಯಾದ ಲಾಗೋಸ್, ಐರ್ಲೆಂಡ್‌ನ ಬ್ಯೂನಸ್, ಅರ್ಜೆಂಟೈನಾದ ಐರ್ಲೆಂಡ್ ಮತ್ತು ಭಾರತದ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿವೆ. (ಏಜೆನ್ಸೀಸ್)