ಜಿ ವೆಂಕಟಸುಬ್ಬಯ್ಯಗೆ ಭಾಷಾ ಸಮ್ಮಾನ್‌, ಕೆ ಜಿ ನಾಗರಾಜಪ್ಪನವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

0
587

ಕನ್ನಡದ ಸಂಶೋಧಕ, ಭಾಷಾ ತಜ್ಞ ಜಿ. ವೆಂಕಟಸುಬ್ಬಯ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ಲಭ್ಯವಾಗಿದೆ.

ನವದೆಹಲಿ: ಕನ್ನಡದ ಸಂಶೋಧಕ, ಭಾಷಾ ತಜ್ಞ ಜಿ. ವೆಂಕಟಸುಬ್ಬಯ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2016-17ನೇ ಸಾಲಿನ ಭಾಷಾ ಸಮ್ಮಾನ್ ಪ್ರಶಸ್ತಿ ಲಭ್ಯವಾಗಿದೆ.

ಅಧ್ಯಕ್ಷ ಚಂದ್ರಶೇಖರ್ ಕಂಬಾರ ನೇತೃತ್ವದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಕನ್ನಡದ ಮತ್ತೊಬ್ಬ ಸೃಜನಶೀಲ ಲೇಖಕ ಕೆ.ಜಿ ನಾಗರಾಜಪ್ಪ ರಚನೆಯ ಚಿಂತನಶೀಲ ಬರಹ ಮಾಲಿಕೆ ‘ಅನುಶ್ರೇಣಿ ಯಜಮಾನಿಕೆ’ ಪುಸ್ತಕಕ್ಕೆ 2018ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

2016-17ನೇ ಸಾಲಿನ ಭಾಷಾ ಸಮ್ಮಾನ್ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಹೊಂದಿರಲಿವೆ.

ಸಭೆಯಲ್ಲಿ 24 ಭಾರತೀಯ ಭಾಷೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. 7 ಕಥಾ ಸಂಕಲನ, ಆರು ಕಾದಂಬರಿ, ಸಣ್ಣ ಕಥೆಗಳು, ಮೂರು ಸಾಹಿತ್ಯ ಮಿಮರ್ಷೆ ಮತ್ತು ಎರಡು ಪ್ರಬಂಧಗಳಿಗೆ 2018ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

2019ರ ಜನವರಿ 29ರಂದು ದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದ್ದು, ಭಾಷಾ ಸಮ್ಮಾನ್‌ ಪ್ರಶಸ್ತಿಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ವಿಶೇಷ ಸಮಾರಂಭವೊಂದರಲ್ಲಿ ವಿತರಿಸಲಿದ್ದಾರೆ.