ಜಿ.ಎಸ್.ಟಿ ವರಮಾನ ಕುಸಿತ

0
14

ಸರಕು ಮತ್ತು ಸೇವಾ ತೆರಿಗೆಯ(ಜಿ.ಎಸ್.ಟಿ) ಮೇ ತಿಂಗಳ ಸಂಗ್ರಹವು 94,016 ಕೋಟಿಗಳಷ್ಟಾಗಿದೆ. ಏಪ್ರೀಲ್ ತಿಂಗಳಲ್ಲಿ 1.03 ಲಕ್ಷ ಕೋಟಿಗಳಷ್ಟು ತೆರಿಗೆ ವರಮಾನ ಸಂಗ್ರಹಗೊಂಡಿತ್ತು.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ(ಜಿ.ಎಸ್.ಟಿ) ಮೇ ತಿಂಗಳ ಸಂಗ್ರಹವು 94,016 ಕೋಟಿಗಳಷ್ಟಾಗಿದೆ. ಏಪ್ರೀಲ್ ತಿಂಗಳಲ್ಲಿ 1.03 ಲಕ್ಷ ಕೋಟಿಗಳಷ್ಟು ತೆರಿಗೆ ವರಮಾನ ಸಂಗ್ರಹಗೊಂಡಿತ್ತು. 62.47 ಲಕ್ಷ ವಹಿವಾಟುದಾರರು ಮೇ ತಿಂಗಳಲ್ಲಿ ತಮ್ಮ ಮಾರಾಟ ವಹಿವಾಟಿನ ವಿವರಗಳನ್ನು(ಜಿ.ಎಸ್.ಟಿ.ಆರ್ –3ಬಿ) ಸಲ್ಲಿಸಿದ್ದಾರೆ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಮೇ ತಿಂಗಳಿನಲ್ಲಿ ಸಂಗ್ರಹಗೊಂಡಿರುವ 94 ಸಾವಿರ ಕೋಟಿ ತೆರಿಗೆಯಲ್ಲಿ ಕೇಂದ್ರದ ಜಿ.ಎಸ್.ಟಿ 15,866 ಕೋಟಿ, ರಾಜ್ಯ ಜಿ.ಎಸ್.ಟಿ 21,691 ಕೋಟಿ, ಸಮನ್ವಯ ಜಿ.ಎಸ್.ಟಿ 48,120 ಕೋಟಿ ಮತ್ತು ಸೆಸ್ ರೂಪದಲ್ಲಿ 7,339 ಕೋಟಿ ಸಂಗ್ರಹವಾಗಿದೆ.

ಏಪ್ರೀಲ್ ತಿಂಗಳ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಮೇ ತಿಂಗಳ ಸಂಗ್ರಹವು ಕಡಿಮೆಯಾಗಿದೆ. ಆದರೆ 2017-18 ರ ಹಣಕಾಸು ವರ್ಷದಲ್ಲಿನ ಸರಾಸರಿ ಸಂಗ್ರಹಕ್ಕೆ (89,885 ಕೋಟಿ) ಹೋಲಿಸಿದರೆ ಇದು ಹೆಚ್ಚಿನ ಮಟ್ಟದಲ್ಲಿ ಇದೆ. ವರ್ಷಾಂತ್ಯದ ಕಾರಣಕ್ಕೆ ಏಪ್ರೀಲ್ ತಿಂಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ರಾಜ್ಯಗಳಿಗೆ ಪರಿಹಾರ

ರಾಜ್ಯಗಳಿಗೆ ಪರಿಹಾರ ರೂಪದಲ್ಲಿ ಮಾರ್ಚ್ ತಿಂಗಳಿನಲ್ಲಿ 6,696 ಕೋಟಿ ಬಿಡುಗಡೆ ಮಾಡಲಾಗಿದೆ.

2017 ರ ಜುಲೈ ತಿಂಗಳಿನಿಂದ 2018 ರ ಮಾರ್ಚ್ ವರೆಗಿನ ಅವಧಿಯಲ್ಲಿ ಒಟ್ಟು 47,844 ಕೋಟಿಗಳಷ್ಟು ಪರಿಹಾರವನ್ನು ರಾಜ್ಯಗಳಿಗೆ ವಿತರಿಸಲಾಗಿದೆ.