ಜಿಸ್ಯಾಟ್–31 ಯಶಸ್ವಿ ಉಡಾವಣೆ

0
470

ಇಸ್ರೊ ನಿರ್ಮಿತ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–31 ಫ್ರೆಂಚ್‌ಗಯಾನದಿಂದ 2019 ಮಾರ್ಚ್ 5 ರ ಮಂಗಳವಾರ ಬೆಳಿಗ್ಗೆ ಉಡಾವಣೆ ಮಾಡಲಾಯಿತು.

ಬೆಂಗಳೂರು: ಇಸ್ರೊ ನಿರ್ಮಿತ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–31 ಫ್ರೆಂಚ್‌ ಗಯಾನದಿಂದ ಮಂಗಳವಾರ ಬೆಳಿಗ್ಗೆ ಉಡಾವಣೆ ಮಾಡಲಾಯಿತು.

ಏರಿಯಾನೆ 5 ವಿಎ–247 ಉಡ್ಡಯನ ವಾಹನದ ಮೂಲಕ ಮುಂಜಾನೆ 2.31ರ ವೇಳೆಗೆ ಸೌದಿ ಅರೇಬಿಯಾದ ಭೂಸ್ಥಿರ ಉಪಗ್ರಹ 1ರ ಜೊತೆಗೆ ನಭಕ್ಕೆಹಾರಿ ಬಿಡಲಾಯಿತು. 42 ನಿಮಿಷಗಳ ಅವಧಿಯಲ್ಲಿ ಜಿಸ್ಯಾಟ್‌–31 ಏರಿಯಾನೆಯಿಂದ ಪ್ರತ್ಯೇಕಗೊಂಡಿತು.

2536 ಕೆ.ಜಿ ತೂಕದ ಉಪಗ್ರಹವು ಕ್ಯೂ–ಬ್ಯಾಂಡ್‌ ಟ್ರಾನ್ಸ್‌ಪಾಂಡರ್‌ ಅನ್ನು ಭೂಸ್ಥಿರ ಕಕ್ಷೆಯಲ್ಲಿ ನೆಲೆಗೊಳಿಸಿದೆ. ಈಗಾಗಲೇ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪಗ್ರಹಗಳಿಗೆ ಪೂರಕವಾಗಿ ನಿರಂತರ ಸೇವೆ ನೀಡಲಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ತಿಳಿಸಿದರು.