ಜಿಮ್ನಾಸ್ಟಿಕ್ಸ್‌: ದೀಪಾಗೆ ಕಂಚು

0
282

ಭಾರತದ ದೀಪಾ ಕರ್ಮಾಕರ್‌ ಅವರು ಜರ್ಮನಿಯ ಕೊಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ವಾಲ್ಟ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ನವದೆಹಲಿ (ಪಿಟಿಐ): ಭಾರತದ ದೀಪಾ ಕರ್ಮಾಕರ್‌ ಅವರು ಜರ್ಮನಿಯ ಕೊಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ವಾಲ್ಟ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಬ್ಯಾಲೆನ್ಸ್ ಬೀಮ್‌ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ.

ಎರಡನೇ ದಿನವಾದ ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 23ನೇ ಸ್ಥಾನ ಗಳಿಸಿದ್ದಾರೆ. ತ್ರಿ‍‍ಪುರಾದ ದೀಪಾ 11.66 (4.8+6.266) ಸ್ಕೋರ್‌ ಗಳಿಸಿದರು. ಪುರುಷರ ಪ್ಯಾರಲಲ್ ಬಾರ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಒಟ್ಟು 29 ಮಂದಿಯ ಪೈಕಿ ಭಾರತದ ರಾಕೇಶ್ ಪಾತ್ರಾ 16ನೇ ಸ್ಥಾನ ಗಳಿಸಿದರು. ಅವರು 13,033 ಸ್ಕೋರ್‌ ಕಲೆ ಹಾಕಿದ್ದರು.

ಪುರುಷರ ವಾಲ್ಟ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ಆಶಿಶ್‌ದಕುಮಾರ್‌ 12.866 ಸ್ಕೋರ್‌ನೊಂದಿಗೆ 23ನೇ ಸ್ಥಾನ ಗಳಿಸಿದರು. ಈ ಸ್ಪರ್ಧೆಯಲ್ಲಿ ಒಟ್ಟು 27 ಜಿಮ್ನಾಸ್ಟ್‌ಗಳಿದ್ದರು. ಫ್ಲೋರ್ ಎಕ್ಸೈಸ್‌ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಅರುಣಾ ರೆಡ್ಡಿ ಕಾಲುನೋವಿನಿಂದಾಗಿ ಕಣಕ್ಕೆ ಇಳಿಯಲಿಲ್ಲ.‌