ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್ ಹಮ್ಮರ್ಸ್ಕೊಲ್ಡ್ ಪ್ರಶಸ್ತಿ ನೀಡಿದೆ.
ವಿಶ್ವಸಂಸ್ಥೆ (ಪಿಟಿಐ): ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್ ಹಮ್ಮರ್ಸ್ಕೊಲ್ಡ್ ಪ್ರಶಸ್ತಿ ನೀಡಿದೆ.
ವಿಶ್ವಸಂಸ್ಥೆಯ ಎರಡನೇ ಮಹಾ ಕಾರ್ಯದರ್ಶಿ ಡ್ಯಾಗ್ ಹಮ್ಮರ್ಸ್ಕೊಲ್ಡ್ 1961ರಲ್ಲಿ ಕಾಂಗೊದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಹೆಸರಿನಲ್ಲಿ ವಿಶ್ವಸಂಸ್ಥೆ ಪ್ರಶಸ್ತಿ ಸ್ಥಾಪಿಸಿದ್ದು ಹುತಾತ್ಮರಾದ ಶಾಂತಿಪಾಲನಾ ಕಾರ್ಯಪಡೆಯ ಸೈನಿಕರಿಗೆ ನೀಡುತ್ತಿದೆ. 1948ರಿಂದ ಇದುವರೆಗೆ ವಿವಿಧ ದೇಶಗಳ 3,800 ಮಂದಿ ಶಾಂತಿಪಾಲನಾ ಪಡೆಯ ಸೈನಿಕರು ಮತ್ತು ಅಧಿಕಾರಿಗಳನ್ನು ವಿಶ್ವಸಂಸ್ಥೆ ಕಳೆದುಕೊಂಡಿದೆ.
ವಿವಿಧ ದೇಶಗಳಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಹುತಾತ್ಮರಾದ ಯೋಧರು, ಪೊಲೀಸರು ಹಾಗೂ ನಾಗರಿಕ ಸಿಬ್ಬಂದಿ ಸೇರಿದಂತೆ ಒಟ್ಟು 119 ಜನರಿಗೆ ಮರಣೋತ್ತರವಾಗಿ ಗೌರವಿಸಲಾಯಿತು.