ಜಿಎಸ್‌ಟಿ: 2 ನೇ ವರ್ಷಾಚರಣೆ

0
27

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿರುವುದರಿಂದ ಜುಲೈ 1ರಂದು ಕೇಂದ್ರ ಸರ್ಕಾರ ಎರಡನೆ ವರ್ಷಾಚರಣೆ ಸಮಾರಂಭ ಏರ್ಪಡಿಸಿದೆ.

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿರುವುದರಿಂದ ಜುಲೈ 1ರಂದು ಕೇಂದ್ರ ಸರ್ಕಾರ ಎರಡನೆ ವರ್ಷಾಚರಣೆ ಸಮಾರಂಭ ಏರ್ಪಡಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಭೆಯಲ್ಲಿ ಮಾತನಾಡಲಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯು ಎರಡು ವರ್ಷಗಳಲ್ಲಿ ಸಾಗಿ ಬಂದಿರುವುದರ ಮತ್ತು ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಸಮಾರಂಭದಲ್ಲಿ ವಿವರಗಳನ್ನು ನೀಡಲಾಗುವುದು.

ಹೊಸ ರಿಟರ್ನ್‌ ಸಲ್ಲಿಸುವುದಕ್ಕೆ ಅಂದು ಪ್ರಾಯೋಗಿಕ ಚಾಲನೆ ನೀಡಲಾಗುವುದು. ಸದ್ಯ ಬಳಕೆಯಲ್ಲಿ ಇರುವ ‘ಜಿಎಸ್‌ಟಿಆರ್‌–3ಬಿ’ ಮತ್ತು ‘ಜಿಎಸ್‌ಟಿಆರ್‌–1’ (ಪೂರೈಕೆ ರಿಟರ್ನ್‌) ಬದಲಿಗೆ ಹೊಸ ರಿಟರ್ನ್ಸ್‌ ಪರಿಚಯಿಸಲಾಗುತ್ತಿದೆ.

ಬೆಂಗಳೂರು ವರದಿ: ಬೆಂಗಳೂರಿನಲ್ಲಿಯೂ ಇದೇ ಜುಲೈ1 ರ ಸೋಮವಾರ ‘ಜಿಎಸ್‌ಟಿ ದಿನ’ ಆಚರಿಸಲಾಗುವುದು.

ಕೇಂದ್ರೀಯ ತೆರಿಗೆ (ಜಿಎಸ್‌ಟಿ) ಪ್ರಧಾನ ಮುಖ್ಯ ಕಮಿಷನರ್‌ ಕಚೇರಿಯು ಸಮಾರಂಭ ಏರ್ಪಡಿಸಿದೆ.

# ಭಾರತದ  ಜಿಎಸ್‌ಟಿಯನ್ನ ಜುಲೈ 1, 2017 ರಂದು ಜಾರಿಗೆ ತರಲಾಗಿದೆ.

# ಭಾರತದಲ್ಲಿ ಜಿಎಸ್‌ಟಿಯನ್ನ ಒಟ್ಟು 4 ಹಂತಗಳಲ್ಲಿ( ಶೇ 5,  ಶೇ 12,  ಶೇ 18,  ಶೇ 28) ವಿಧಿಸಲಾಗುತ್ತದೆ.ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೋಹಾಲ್ ಯುಕ್ತ ಪಾನೀಯಗಳು ಮತ್ತು ವಿದ್ಯುತ್‌ಗೆ ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಿಧಿಸಲಾಗುವುದಿಲ್ಲ ಬದಲಾಗಿ ಹಿಂದಿನ ತೆರಿಗೆ ನಿಯಮದ ಪ್ರಕಾರ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ವಿಧಿಸುತ್ತವೆ.