ಜಿಎಸ್‌ಟಿ: ಸೆಸ್‌ ಹೆಚ್ಚಳ

0
15

ಮಧ್ಯಮ ಗಾತ್ರ, ವಿಲಾಸಿ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೆಸ್‌ ಹೆಚ್ಚಳ ನಿರ್ಧಾರವು ಸೋಮವಾರದಿಂದ ಅಂದರೇ 11/09/2017 ರಿಂದ ಜಾರಿಗೆ ಬರಲಿದೆ.

ಮಧ್ಯಮ ಗಾತ್ರ, ವಿಲಾಸಿ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೆಸ್‌ ಹೆಚ್ಚಳ ನಿರ್ಧಾರವು ಸೋಮವಾರದಿಂದ ಜಾರಿಗೆ ಬರಲಿದೆ.

ಮಧ್ಯಮ ಗಾತ್ರ ಕಾರ್‌ಗೆ ಶೇ 2, ದೊಡ್ಡ ಗಾತ್ರ ಕಾರ್‌ಗಳಿಗೆ ಶೇ 5 ಮತ್ತು ಎಸ್‌ಯುವಿಗಳ ಮೇಲೆ ಶೇ 7ರಷ್ಟು ಸೆಸ್‌ ವಿಧಿಸಲು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.  ಇದರಿಂದ ಈ ವಾಹನಗಳ ಮೇಲಿನ ಜಿಎಸ್‌ಟಿ ದರವು ಕ್ರಮವಾಗಿ ಶೇ 45, 48 ಮತ್ತು 50ಕ್ಕೆ ಏರಿಕೆಯಾಗಿದೆ.

ಜಿಎಸ್‌ಟಿ ಸೆಸ್‌ ಹೆಚ್ಚಳ ಸಂಬಂಧ ಸೆ. 11 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಇಸಿ) ಟ್ವೀಟ್‌ ಮಾಡಿದೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ಕಾರ್‌ ಬೆಲೆ ಗರಿಷ್ಠ ₹ 3 ಲಕ್ಷದವರೆಗೆ ಕಡಿಮೆಯಾಗಿತ್ತು. ಈ ಗೊಂದಲ ನಿವಾರಿಸಲು ಮಂಡಳಿಯು ಸೆಸ್‌ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ.

ಗ್ರಾಹಕರಿಗೆ ವರ್ಗಾವಣೆ:- ಹೆಚ್ಚಿಸಿದ ಸೆಸ್ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ವಾಹನ ತಯಾರಿಕಾ ಸಂಸ್ಥೆಗಳಾದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟೊಯೊಟೊ ಕಿರ್ಲೊಸ್ಕರ್‌, ಔಡಿ, ಮರ್ಸಿಡಿಸ್‌ ಬೆಂಜ್‌ ಮತ್ತು ಜೆಎಲ್‌ಆರ್‌ ಇಂಡಿಯಾ ಪ್ರಕಟಿಸಿವೆ.

ದರಗಳ ಬದಲಾವಣೆಯು ಮಾರುಕಟ್ಟೆಯಲ್ಲಿ ಅಸ್ಥಿರತೆಗೆ ಕಾರಣವಾಗಿ, ಬೇಡಿಕೆ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಈ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.