ಜಿಎಸ್‌ಟಿ ಸಂಗ್ರಹ ಇಳಿಕೆ

0
468

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ನವೆಂಬರ್‌ನಲ್ಲಿ ₹ 97,637 ಕೋಟಿಯಷ್ಟಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ನವೆಂಬರ್‌ನಲ್ಲಿ  97,637 ಕೋಟಿಯಷ್ಟಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಅಕ್ಟೋಬರ್‌ನಲ್ಲಿ ಸಂಗ್ರಹವಾಗಿದ್ದ  1 ಲಕ್ಷ ಕೋಟಿಗೆ ಹೋಲಿಸಿದರೆ ನವೆಂಬರ್‌ನಲ್ಲಿ 2,363 ಕೋಟಿ ಕಡಿಮೆ ಸಂಗ್ರಹವಾಗಿದೆ.

ಮಾರಾಟದ ಅಂತಿಮ ರಿಟರ್ನ್‌ ‘ಜಿಎಸ್‌ಟಿಆರ್‌–3ಬಿ’ ಸಲ್ಲಿಕೆ 69.6 ಲಕ್ಷಕ್ಕೆ ತಲುಪಿದೆ.ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ರಾಜ್ಯಗಳಿಗೆ ನೀಡಿರುವ ಪರಿಹಾರದ ಮೊತ್ತ  11,922 ಕೋಟಿಯಷ್ಟಿದೆ.

ಒಟ್ಟಾರೆ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ  16,812 ಕೋಟಿ, ರಾಜ್ಯ ಜಿಎಸ್‌ಟಿ  23,070 ಕೋಟಿ ಹಾಗೂ ಸಮಗ್ರ ಜಿಎಸ್‌ಟಿ 49,726 ಕೋಟಿ ಇದೆ.

‘ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ ತಿಂಗಳ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಆದರೆ, ಹಣಕಾಸು ವರ್ಷದ ತಿಂಗಳಿನಲ್ಲಿ ಸಂಗ್ರಹವಾಗಿರುವ ಗರಿಷ್ಠ ಮೊತ್ತ ಇದಾಗಿದೆ’ ಎಂದು ಸಲಹಾ ಸಂಸ್ಥೆ ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ (ಇವೈ) ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.