‘ಜಿಎಸ್‌ಟಿ’ಯ ರಾಜಿ ತೆರಿಗೆ: ರಿಯಾಯ್ತಿ

0
232

ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ಕಂಪೋಸಿಷನ್‌ ಸ್ಕೀಮ್‌ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ವಹಿವಾಟುದಾರರು ‘ಜಿಎಸ್‌ಟಿಆರ್‌–4’ ಸಲ್ಲಿಸುವಾಗ ಕೆಲ ವಿನಾಯ್ತಿ ಪಡೆಯಲಿದ್ದಾರೆ.

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ಕಂಪೋಸಿಷನ್‌ ಸ್ಕೀಮ್‌ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ವಹಿವಾಟುದಾರರು ‘ಜಿಎಸ್‌ಟಿಆರ್‌–4’ ಸಲ್ಲಿಸುವಾಗ ಕೆಲ ವಿನಾಯ್ತಿ  ಪಡೆಯಲಿದ್ದಾರೆ.

ಮಾರಾಟಗಾರರಿಂದ ಸರಕು ಖರೀದಿಸಿದ ವಿವರಗಳನ್ನೆಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ  ‘ಜಿಎಸ್‌ಟಿಆರ್‌–4’ನಲ್ಲಿ ದಾಖಲಿಸುವ ಅಗತ್ಯವು ಇನ್ನು ಮುಂದೆ ಇರುವುದಿಲ್ಲ. ವಹಿವಾಟುದಾರರಲ್ಲಿ ಮನೆ ಮಾಡಿದ್ದ ಕೆಲ ಅನುಮಾನಗಳನ್ನು ಈಗ ದೂರ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.  ವಾರ್ಷಿಕ 1 ಕೋಟಿವರೆಗೆ ವಹಿವಾಟು ನಡೆಸುವ 18 ಲಕ್ಷ ವಹಿವಾಟುದಾರರು ಈ ಸ್ಕೀಮ್‌ ಆಯ್ಕೆ ಮಾಡಿಕೊಂಡಿದ್ದಾರೆ.