ಜಿಎಸ್​ಟಿ ರಿಟರ್ನ್ಸ್​ಗೆ ಮತ್ತಷ್ಟು ಕಾಲಾವಕಾಶ

0
17

ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಿನ ಖರೀದಿ ಹಾಗೂ ಮಾರಾಟದ ವಿವರ, ಆದಾಯ, ತೆರಿಗೆ ಸಲ್ಲಿಕೆ ಮತ್ತಿತರ ವಿವರಗಳನ್ನು ಸಲ್ಲಿಸಲು ಹೆಚ್ಚು ವರಿ ಕಾಲಾವಕಾಶ ದೊರೆತಿದ್ದು, ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಿನ ಖರೀದಿ ಹಾಗೂ ಮಾರಾಟದ ವಿವರ, ಆದಾಯ, ತೆರಿಗೆ ಸಲ್ಲಿಕೆ ಮತ್ತಿತರ ವಿವರಗಳನ್ನು ಸಲ್ಲಿಸಲು ಹೆಚ್ಚು ವರಿ ಕಾಲಾವಕಾಶ ದೊರೆತಿದ್ದು, ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ಜುಲೈ ತಿಂಗಳ ಮಾರಾಟ ರಿಟರ್ನ್ಸ್ (ಜಿಎಸ್​ಟಿಆರ್-1) ಸಲ್ಲಿಕೆಗೆ ನೀಡಲಾಗಿದ್ದ ಗಡುವು ಸೆಪ್ಟೆಂಬರ್ 5ನ್ನು ಸೆಪ್ಟೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ. ಖರೀದಿ ರಿಟರ್ನ್ಸ್ (ಜಿಎಸ್​ಟಿಆರ್-2) ಸೆಪ್ಟೆಂಬರ್. 10ರ ಬದಲು ಸೆಪ್ಟೆಂಬರ್. 25ರ ವರೆಗೆ ಸಲ್ಲಿಸಬಹುದು. ಜಿಎಸ್​ಟಿಆರ್-3 ಗಡು ವನ್ನು ಸೆಪ್ಟೆಂಬರ್. 15ರ ಬದಲು ಸೆಪ್ಟೆಂಬರ್. 30ಕ್ಕೆ ವಿಸ್ತರಿಸಲಾಗಿದೆ. ಜುಲೈನಲ್ಲಿ 92,283 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇದು ಒಟ್ಟು ತೆರಿಗೆ ಸಂಗ್ರಹದ ಶೇ. 64.42 ರಷ್ಟಾಗಿದೆ.