“ಜಿಎಂ” ಇಂಡಿಯಾದ ಪ್ರಚಾರ ರಾಯಭಾರಿ ನಟ ಬೆನೆಡಿಕ್ಟ್‌

0
308

ಕಾರ್‌ ತಯಾರಿಕಾ ಸಂಸ್ಥೆ ಮೋರಿಸ್‌ ಗ್ಯಾರೇಜ್ಸ್‌ (ಎಂಜಿ) ಇಂಡಿಯಾದ ಪ್ರಚಾರ ರಾಯಭಾರಿಯಾಗಿ ಬ್ರಿಟನ್‌ ನಟ ಬೆನೆಡಿಕ್ಟ್‌ ಕಂಬರ್‌ಬ್ಯಾಚ್‌ ಆಯ್ಕೆಯಾಗಿದ್ದಾರೆ.

ನವದೆಹಲಿ: ಕಾರ್‌ ತಯಾರಿಕಾ ಸಂಸ್ಥೆ ಮೋರಿಸ್‌ ಗ್ಯಾರೇಜ್ಸ್‌ (ಎಂಜಿ) ಇಂಡಿಯಾದ ಪ್ರಚಾರ ರಾಯಭಾರಿಯಾಗಿ ಬ್ರಿಟನ್‌ ನಟ ಬೆನೆಡಿಕ್ಟ್‌ ಕಂಬರ್‌ಬ್ಯಾಚ್‌ ಆಯ್ಕೆಯಾಗಿದ್ದಾರೆ.

ಬೆನೆಡಿಕ್ಟ್‌ ಅವರು, ಬ್ರಿಟನ್ನಿನ ಹಲವಾರು ಜನಪ್ರಿಯ ಟಿವಿ ಕಾರ್ಯಕ್ರಮಗಳು ಮತ್ತು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ದೊಡ್ಡ ಬಳಗ ಹೊಂದಿದ್ದಾರೆ. ‘ಅತ್ಯುಷ್ಕೃಷ್ಟ ಬ್ರ್ಯಾಂಡ್‌ ಆಗಿರುವ ‘ಎಂಜಿ’ ಜತೆಗೆ ಕೆಲಸ ಮಾಡಲು ನನಗೆ ಖುಷಿಯಾಗುತ್ತಿದೆ’ ಎಂದು ಬೆನೆಡಿಕ್ಟ್‌ ಪ್ರತಿಕ್ರಿಯಿಸಿದ್ದಾರೆ.

’ಬೆನೆಡಿಕ್ಟ್‌ ಅವರ ವ್ಯಕ್ತಿತ್ವವು ನಮ್ಮ ಸಂಸ್ಥೆಯ ಬ್ರ್ಯಾಂಡ್‌ ಜತೆಗೆ ಹೆಚ್ಚು ಸಾಮ್ಯತೆ ಹೊಂದಿದೆ’ ಎಂದು ಎಂಜಿ ಇಂಡಿಯಾದ ಸಿಇಒ ರಾಜೀವ್‌ ಛಬಾ ಪ್ರತಿಕ್ರಿಯಿಸಿದ್ದಾರೆ.

ಬ್ರಿಟನ್‌ನಲ್ಲಿ 1924ರಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಎಂಜಿ’ಯ ಆಕರ್ಷಕ ನೋಟ, ವಿನ್ಯಾಸ ಮತ್ತು ಸೊಬಗಿನ ಕಾರ್‌ಗಳು ವಿಶ್ವದಾದ್ಯಂತ ಅನೇಕ ಖ್ಯಾತನಾಮರ ಮನಗೆದ್ದಿವೆ. ಸಂಸ್ಥೆಯು 9 ದಶಕಗಳಲ್ಲಿ ಆಧುನಿಕತೆ ಮತ್ತು ಹೊಸತನ ಅಳವಡಿಸಿಕೊಂಡು ಭವಿಷ್ಯದ ಜತೆ ಹೆಜ್ಜೆ ಹಾಕಿದೆ. 

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ‘ಎಂಜಿ’ ಬ್ರ್ಯಾಂಡ್‌ನ ಕಾರ್‌ಗಳು ಪ್ರವೇಶಿಸಲಿವೆ. ಗುಜರಾತ್‌ನಲ್ಲಿ ತಯಾರಿಕಾ ಘಟಕ ಹೊಂದಿರುವ ಸಂಸ್ಥೆಯು ಎರಡನೆ ತ್ರೈಮಾಸಿಕದಲ್ಲಿ ತನ್ನ ‘ಹೆಕ್ಟರ್‌’ ಕಾರನ್ನು ಪರಿಚಯಿಸಲಿದೆ.