ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ಎನಾಕ್‌ಗೆ 10 ವರ್ಷ ನಿಷೇಧ : ಐ.ಸಿ.ಸಿ

0
349

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ಎನಾಕ್‌ ಇಕೋಪ್‌ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 10 ವರ್ಷಗಳ ನಿಷೇಧ ಹೇರಿದೆ. ಐಸಿಸಿಯ ಭ್ರಷ್ಟಾಚಾರ ತಡೆ ನಿಯಮಗಳನ್ನು ಮೀರಿ ನಡೆದ ಕಾರಣ ಈ ‘ಶಿಕ್ಷೆ’ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಮುಂಬೈ  (ರಾಯಿಟರ್ಸ್‌): ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ಎನಾಕ್‌ ಇಕೋಪ್‌ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 10 ವರ್ಷಗಳ ನಿಷೇಧ ಹೇರಿದೆ. ಐಸಿಸಿಯ ಭ್ರಷ್ಟಾಚಾರ ತಡೆ ನಿಯಮಗಳನ್ನು ಮೀರಿ ನಡೆದ ಕಾರಣ ಈ ‘ಶಿಕ್ಷೆ’ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಐಸಿಸಿ ನಿಯಮದ 2.4.6 ಮತ್ತು 2.4.7ರ ಉಲ್ಲಂಘನೆಗಾಗಿ ಕಳೆದ ಬಾರಿ ಇಕೋಪ್ ಅವರನ್ನು ಅಮಾನತಿನಲ್ಲಿಡಲಾಗಿತ್ತು. ಸಹಕಾರಕ್ಕೆ ನಿರಾಕರಣೆ, ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಅಡ್ಡಿ ಮತ್ತು ವಿಳಂಬ ಮುಂತಾದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು. ಅಮಾನತಿನ ನಂತರವೂ ತನಿಖೆಗೆ ಸ್ಪಂದಿಸದ ಕಾರಣ ನಿಷೇಧ ಹೇರಲು ನಿರ್ಧರಿಸಲಾಗಿದೆ.

ಎನಾಕ್‌ ಇಕೋಪ್‌, ಐಸಿಸಿಯ ಕೆಂಗಣ್ಣಿಗೆ ಪಾತ್ರರಾಗುತ್ತಿರುವ ಜಿಂಬಾಬ್ವೆಯ ಎರಡನೇ ಕ್ರಿಕೆಟ್ ಆಡಳಿತಗಾರ. ಈ ಹಿಂದೆ ರಾಜನ್ ನಾಯರ್ ಅವರ ಮೇಲೆ 20 ವರ್ಷಗಳ ನಿಷೇಧ ಹೇರಲಾಗಿತ್ತು. ತಂಡದ ನಾಯಕರಾಗಿದ್ದ ಗ್ರೇಮ್‌ ಕ್ರೀಮರ್‌ ಅವರನ್ನು ಮ್ಯಾಚ್‌ ಫಿಕ್ಸ್ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.