ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ ಅತ್ಯಂತ ಸ್ವಚ್ಛ ವಿದ್ಯಾಲಯ.

0
21

ಮಾನವ ಸಂಪನ್ಮೂಲ ಸಚಿವಾಲಯವು ನಾಲ್ಕು ವರ್ಗಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿದ್ದು, ವಿಶ್ವವಿದ್ಯಾಲಯ, ಕಾಲೇಜು, ತಾಂತ್ರಿಕ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಎಂಬ ವರ್ಗೀಕರಣ ಮಾಡಲಾಗಿತ್ತು. ಒಟ್ಟು 3,500 ವಿದ್ಯಾಸಂಸ್ಥೆಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ “ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ” ಅತ್ಯಂತ ಸ್ವಚ್ಛ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಚ್ಛತೆಯ ಬಗ್ಗೆ ನಡೆಸಲಾದ ಮೊದಲ ಸಮೀಕ್ಷೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸರ್ಕಾರಿ ವಿದ್ಯಾಸಂಸ್ಥೆಗಳನ್ನು ಹಿಂದಿಕ್ಕಿವೆ. ಸೋನಿಪತ್‌ನಲ್ಲಿರುವ ಒ.ಪಿ. ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ ಅತ್ಯಂತ ಸ್ವಚ್ಛ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಮಣಿಪಾಲ ವಿಶ್ವವಿದ್ಯಾಲಯದ ಗುಜರಾತ್‌ ಕ್ಯಾಂಪಸ್‌ಗೆ ಎರಡನೇ ಸ್ಥಾನ ದೊರಕಿದೆ.

ಎಷ್ಟು ವಿದ್ಯಾಲಯಗಳು ಭಾಗವಹಿಸಿದ್ದವು?

ಒಟ್ಟು 3,500 ವಿದ್ಯಾಸಂಸ್ಥೆಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಮಾನವ ಸಂಪನ್ಮೂಲ ಸಚಿವಾಲಯವು ನಾಲ್ಕು ವರ್ಗಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು. ವಿಶ್ವವಿದ್ಯಾಲಯ, ಕಾಲೇಜು, ತಾಂತ್ರಿಕ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಎಂಬ ವರ್ಗೀಕರಣ ಮಾಡಲಾಗಿತ್ತು. 

ಸ್ವಚ್ಛತೆಯಲ್ಲಿ ಯಾವ ರಾಜ್ಯದ ವಿದ್ಯಾಸಂಸ್ಥೆಗಳು ಮುಂದೆ?

ಸ್ವಚ್ಛತೆಯ ರ‍್ಯಾಂಕಿಂಗ್‌ನಲ್ಲಿ ತಮಿಳುನಾಡಿನ ವಿದ್ಯಾಸಂಸ್ಥೆಗಳೇ ಮುಂದಿವೆ. ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ವರ್ಗಗಳ ಮೊದಲ ಐದು ಸ್ಥಾನಗಳಲ್ಲಿ ತಮಿಳುನಾಡಿನ ಒಟ್ಟು 11 ಸಂಸ್ಥೆಗಳು ಸ್ಥಾನ ಪಡೆದಿವೆ.

ವಿಶ್ವವಿದ್ಯಾಲಯ ಮತ್ತು ವಿದ್ಯಾಸಂಸ್ಥೆಗಳಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಸುಸ್ಥಿರವಾದ ರೀತಿಯಲ್ಲಿ ವಿಲೇವಾರಿ ಮಾಡಲು ದಾರಿಗಳನ್ನು ಕಂಡುಕೊಳ್ಳಬೇಕು. ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೂ ಸ್ವಚ್ಛತೆ ಕಾಪಾಡಲು ನೆರವಾಗಬೇಕು ಎಂದು ಜಾವಡೇಕರ್‌ ಹೇಳಿದ್ದಾರೆ.

‘ಇಂಧನ ಉಳಿಸಿ, ವಿದ್ಯುತ್‌ ಉಳಿಸಿ, ತ್ಯಾಜ್ಯವನ್ನು ಸುಸ್ಥಿರವಾಗಿ ವಿಲೇವಾರಿ ಮಾಡಿ ಮತ್ತು ಜಾಣ ವಿದ್ಯಾಸಂಸ್ಥೆ ಎನಿಸಿಕೊಳ್ಳಿ’ ಎಂದು ಅವರು ಕರೆ ನೀಡಿದರು. ಮುಂದಿನ ವರ್ಷದ (2018) ಸ್ವಚ್ಛ ರ‍್ಯಾಂಕಿಂಗ್‌ಗೆ ಈ ಮೂರು ಅಂಶಗಳೇ ಮುಖ್ಯ ಚೌಕಟ್ಟಾಗಿರುತ್ತವೆ ಎಂದು ಅವರು ತಿಳಿಸಿದರು.

ಬೆಳಗಾವಿಯ ಕೆ.ಎಲ್‌.ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಎಂಡ್‌ ರಿಸರ್ಚ್‌ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.